ಮಂಗಳೂರು ಬಂದರಿಗೆ ಐಷಾರಾಮಿ ಪ್ರವಾಸಿ ಹಡಗನ್ನು ನೋಡಲು ಸ್ಥಳೀಯರು ತಂಡೋಪಾದಿ ತಂಡ… ಏನಿದರ ವಿಶೇಷತೆ?

Views: 62
ಮಂಗಳೂರು, ಮಂಗಳೂರಿನ ಪಣಂಬೂರು ನವ ಮಂಗಳೂರು ಬಂದರಿಗೆ ಹೊಸ ವರ್ಷದ ಮೊದಲ ಐಷಾರಾಮಿ ಪ್ರಯಾಣಿಕರ ಹಡಗು ಆಗಮಿಸಿದೆ. ಎಂ.ಎಸ್. ರಿವೀರಿಯ ಎಂಬ ಹೆಸರಿನ ಐಷಾರಾಮಿ ಹಡಗು ಬುಧವಾರ ಎನ್‌ಎಂಪಿಎಗೆ ಆಗಮಿಸಿದೆ.
ಈ ಋತುವಿನಲ್ಲಿ ಮಂಗಳೂರಿಗೆ ಆಗಮಿಸಿದ ನಾಲ್ಕನೇ ಐಷಾರಾಮಿ ಹಡಗು ಇದಾಗಿದೆ. ಈ ಹಡಗಿನಲ್ಲಿ ಹಡಗಿನಲ್ಲಿ ಸಿಬ್ಬಂದಿ ಸೇರಿ ಒಟ್ಟು 980 ಪ್ರವಾಸಿಗರಿದ್ದರು. ದುಬೈನಿಂದ ಆಗಮಿಸಿದ ಈ ಹಡಗು ಮುಂಬೈ, ಮರ್ಮಗೋವಾ ಬಂದರು ಮೂಲಕ ಮಂಗಳೂರಿಗೆ ಆಗಮಿಸಿದೆ.
ಎಂ.ಎಸ್. ರಿವೀರಿಯ ಎಂಬ ಈ ಐಷಾರಾಮಿ ಹಡಗು 239 ಮೀಟರ್ ಉದ್ದವಿದ್ದು, 66,172 ಟನ್ ಭಾರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹಡಗಿನಲ್ಲಿ ಬಂದ ಪ್ರವಾಸಿಗರಿಗೆ ಮಂಗಳೂರು ಬಂದರು ಪ್ರವೇಶ ಮಾಡುತ್ತಿದ್ದಂತೆ ಕರಾವಳಿಯ ಸಾಂಪ್ರದಾಯಿಕ ಕಲೆ ಯಕ್ಷಗಾನ ಸೇರಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ಕಲಾ ಪ್ರಕಾರಗಳ ಮೂಲಕ ಸ್ವಾಗತ ನೀಡಲಾಯಿತು
ಯಕ್ಷಗಾನ ಕಲಾವಿದರ ಜೊತೆಗೆ ಫೋಟೋ ಕ್ಲಿಕ್ಕಿಸಲು ಸೆಲ್ಫಿ ಸ್ಟಾಂಡ್ ಒದಗಿಸಲಾಗಿತ್ತು.
ಹಡಗಿನ ಪ್ರಮುಖ ಅಧಿಕಾರಿಗಳನ್ನು ಎನ್‌ಎಂಪಿಎ ಬಂದರಿನ ಡೆಪ್ಯುಟಿ ಚೇರ್ಮನ್ ಕೆ.ಜಿ. ನಾಥ್, ಸೆಕ್ರಟರಿ ಜಿಜೋ ಥಾಮಸ್ ಗೌರವಿಸಿದರು. ಆ ಬಳಿಕ ಪ್ರವಾಸಿಗರಿಗೆಂದೇ ಮಂಗಳೂರಿನ ಸ್ಥಳೀಯ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.
ಅಲ್ಲದೆ ವಿದೇಶಿ ಪ್ರವಾಸಿಗರಿಗೆ ಮಂಗಳೂರಿನಲ್ಲಿ ಕಾರ್ಕಳ ಗೊಮ್ಮಟೇಶ್ವರ, ಮೂಡುಬಿದ್ರೆ ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಅಚಲ್ ಕ್ಯಾಶ್ಯು ಫ್ಯಾಕ್ಟರಿ, ಸೈಂಟ್ ಅಲೋಸಿಯಸ್ ಚರ್ಚ್, ಹಳೆ ಶೈಲಿಯ ಮನೆಗಳಿಗೆ ಪ್ರವಾಸಿಗರು ಭೇಟಿ ನೀಡಿದೆ. ಸಂಜೆ ವೇಳೆಗೆ ಹಡಗು ಕೊಚ್ಚಿ ಬಂದರಿನತ್ತ ತೆರಳಿದೆ. ನವ ಮಂಗಳೂರು ಬಂದರಿಗೆ ಹೊಸ ವರ್ಷದ ಮೊದಲ ಐಷಾರಾಮಿ ಹಡಗನ್ನು ನೋಡಲು ಸ್ಥಳೀಯರು ಕಡಲತಟಕ್ಕೆ ತಂಡೋಪಾದಿಯಲ್ಲಿ ಬಂದಿದ್ದಾರೆ.