ಕರಾವಳಿ

ಮಂಗಳೂರು: “ನೀನು ನನ್ನ ಮಗಳೇ ಅಲ್ಲ” ಎಂದಿದ್ದಕ್ಕೆ ಸಾರ್ವಜನಿಕರ ಎದುರೇ ತಾಯಿಯ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ ಮಗಳು!

Views: 204

ಕನ್ನಡ ಕರಾವಳಿ ಸುದ್ದಿ: ಕ್ಷುಲ್ಲಕ ಕಾರಣಕ್ಕೆ ಮಗಳೇ ತನ್ನ ಹೆತ್ತ ತಾಯಿಯ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಅಮಾನವೀಯ ಘಟನೆ ಮಂಗಳೂರಿನ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದಿದೆ.

ವಂಶವೃಕ್ಷದ ದಾಖಲೆಗಳಿಂದ ಮಗಳ ಹೆಸರನ್ನು ತೆಗೆದುಹಾಕುವಂತೆ ತಾಯಿ ಪದೇ ಪದೇ ಪಂಚಾಯತ್ ಗೆ ಮನವಿ ಸಲ್ಲಿಸುತ್ತಿದ್ದರು. ಅಲ್ಲದೆ, ಮಗಳ ವರ್ತನೆ ಕುರಿತು ಪೊಲೀಸ್‌ ಠಾಣೆ ಮತ್ತು ಪಂಚಾಯತ್ ಕಚೇರಿಗಳಿಗೂ ದೂರು ನೀಡಲು ಅಲೆದಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರವೇ ತಾಯಿ-ಮಗಳ ನಡುವಿನ ಜಗಳಕ್ಕೆ ಮುಖ್ಯ ಕಾರಣವಾಗಿತ್ತು.

ಕೆಲ ದಿನಗಳ ಹಿಂದೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿತ್ತು. ಈ ವೇಳೆ 112 ಕಂಟ್ರೋಲ್ ರೂಂಗೆ ಕರೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ತಾಯಿ, “ನೀನು ನನ್ನ ಮಗಳೇ ಅಲ್ಲ” ಎಂದು ಆಕ್ರೋಶದಿಂದ ನುಡಿದಿದ್ದರು ಎನ್ನಲಾಗಿದೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಮಗಳು, ಸಾರ್ವಜನಿಕರ ಎದುರೇ, ಪಂಚಾಯತ್ ಆವರಣದಲ್ಲೇ ತನ್ನ ತಾಯಿಯ ಮೇಲೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾಳೆ.

ಘಟನೆಯ ವಿಡಿಯೋ ಮೊಬೈಲ್ ಫೋನ್ನಲ್ಲಿ ಸೆರೆಯಾಗಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾಯಿಯ ಮೇಲೆ ಮಗಳು ನಡೆಸಿದ ಹಲ್ಲೆಯ ದೃಶ್ಯಗಳನ್ನು ಕಂಡ ಸಾರ್ವಜನಿಕರು ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Related Articles

Back to top button
error: Content is protected !!