ಕರಾವಳಿ

ಮಂಗಳೂರು: ನಗರದ ಸಿಟಿ ಸೆಂಟರ್ ಮಾಲ್‌ಗೆ ಬಂದ ಮಹಿಳೆ ನಾಪತ್ತೆ

Views: 75

ಮಂಗಳೂರು, ಮೇ 3: ತೊಕ್ಕೊಟ್ಟು ಸಮೀಪದ ಪೆರ್ಮನ್ನೂರು ಗ್ರಾಮದ ಕೆರೆಬೈಲ್ ಗುಡ್ಡೆಯ ನಿವಾಸಿ ಸಫನಾ ಎಂಬಾಕೆ ಎಪ್ರಿಲ್ 28ರಂದು ನಗರದಲ್ಲಿ ಕಾಣೆಯಾದ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎ.28ರಂದು ನಗರದ ಸಿಟಿ ಸೆಂಟರ್ ಮಾಲ್‌ಗೆ ತನ್ನ ತಾಯಿಯೊಂದಿಗೆ ಬಂದಿದ್ದ ಸಫನಾ ಬಳಿಕ ಕಾಣೆಯಾಗಿದ್ದಾರೆ. 27ರ ಹರೆಯದ ಸಫನಾರಿಗೆ ಇಬ್ಬರು ಮಕ್ಕಳಿದ್ದಾರೆ. 4.5 ಅಡಿ ಎತ್ತರದ, ಬಿಳಿ ಮೈಬಣ್ಣದ, ಕಪ್ಪುಬಣ್ಣದ ಬುರ್ಖಾ ಧರಿಸಿರುವ ಈಕೆ ಬ್ಯಾರಿ, ಕನ್ನಡ, ತುಳು ಭಾಷೆಯನ್ನು ಮಾತನಾಡುತ್ತಾರೆ.

ಈಕೆಯನ್ನು ಕಂಡವರು ಬಂದರು ಠಾಣೆಗೆ (ಮೊ.ಸಂ: 9480805338,9480802321/0824-2220516) ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Related Articles

Back to top button
error: Content is protected !!