ಕರಾವಳಿ

ಮಂಗಳೂರು ಜೈಲಿನ ಮೇಲೆ ಪೊಲೀಸರ ದಾಳಿ; 25 ಮೊಬೈಲ್, ಗಾಂಜಾ, ಡ್ರಗ್ಸ್‌ ವಶಕ್ಕೆ 

Views: 64

ಮಂಗಳೂರು: ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಕಾರಾಗೃಹ ಮೇಲೆ ಪೊಲೀಸರು ದಾಳಿ ನಡೆಸಿ, ಕೈದಿಗಳಿಂದ 25 ಮೊಬೈಲ್‌, ಗಾಂಜಾ, ಡ್ರಗ್ಸ್‌ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರು ನಗರ ಪೊಲೀಸರಿಂದ ಕಾರ್ಯಾಚರಣೆ ನಡೆದಿದ್ದು, ಏಕಕಾಲಕ್ಕೆ 150ಕ್ಕೂ ಅಧಿಕ ಪೊಲೀಸರು ಪರಿಶೀಲನೆ ನಡೆಸಿ, ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ 25 ಮೊಬೈಲ್, 1 ಬ್ಲೂ ಟೂತ್ ಡಿವೈಸ್, 5 ಇಯರ್ ಪೋನ್, 1 ಪೆನ್ ಡ್ರೈವ್, 5 ಚಾರ್ಜರ್, 1 ಕತ್ತರಿ, 3 ಕೇಬಲ್, ಗಾಂಜಾ ಮತ್ತು ಡ್ರಗ್ಸ್ ಪ್ಯಾಕೆಟ್‌ ಸೇರಿವೆ ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಇಬ್ಬರು ಡಿಸಿಪಿ, ಮೂವರು ಎಸಿಪಿ, 15 ಇನ್‌ಸ್ಪೆಕ್ಟರ್, 150ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Related Articles

Back to top button