ಕರಾವಳಿ

ಮಂಗಳೂರು ಜೈಲಿನಲ್ಲಿ ಕೈದಿಗಳ ಮಧ್ಯೆ ಮತ್ತೆ ಹೊಡೆದಾಟ

Views: 130

ಕನ್ನಡ ಕರಾವಳಿ ಸುದ್ದಿ: ಮಂಗಳೂರು ನಗರದ ಕೋಡಿಯಾಲಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ಮಧ್ಯಾಹ್ನ ಕೈದಿಗಳ ಮಧ್ಯೆ ಹೊಡೆದಾಟ ನಡೆದಿದೆ.

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿ ಕಾರಾಗೃಹದಲ್ಲಿರುವ ಆರೋಪಿ ನೌಷಾದ್ ಯಾನ್ ವಾಮಂಜೂರು ನೌಷದ್ ಯಾನೆ ಚೊಟ್ಟೆ ನೌಷದ್ ಮೇಲೆ ಕೈದಿಗಳು ಹಲ್ಲೆಗೆ ಯತ್ನ ನಡೆಸಿದ ಘಟನೆ ಕಳೆದ ಸಂಜೆ ನಡೆದಿತ್ತು. ಇದರ ಬೆನ್ನಲ್ಲೇ ಇಂದು ಮತ್ತೆ ಹೊಡೆದಾಟ ನಡೆದಿದೆ.

ಅಡುಗೆ ಮಾಡುತ್ತಿದ್ದ ಕೈದಿ ಅಕ್ಷಿತ್ ಎಂಬಾತನಿಗೆ ಅಬ್ದುಲ್ ರಹ್ಮಾನ್ ಯಾನೆ ಮುನ್ನಿ ಯಾನೆ ಮುನೀ‌ರ್, ಉಮ‌ರ್ ಶಿಹಾಬ್ ಮತ್ತಿತರರು ಹಲ್ಲೆ ನಡೆಸಿದ್ದಾರೆ. ಇದರಿಂದ ಕೆಲಕಾಲ ಜೈಲಿನೊಳಗೆ ಆತಂಕದ ವಾತಾವರಣ ಸೃಷ್ಟಿಯಾಯಿತು.ಮಾಹಿತಿ ಪಡೆದ ಪೊಲೀಸರು ಜೈಲಿಗೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದರು.

Related Articles

Back to top button
error: Content is protected !!