ಭೂಕುಸಿತದಿಂದ ರೈಲು ಸಂಚಾರ ವ್ಯತ್ಯಯ: ರಾಜಸ್ಥಾನದಿಂದ ಮಂಗಳೂರಿಗೆ ಬಂದಿದ್ದ ಅಭ್ಯರ್ಥಿಗೆ ಪರೀಕ್ಷೆ ಮಿಸ್..ಯಾರು ಹೊಣೆ ?

Views: 150
ಬೆಂಗಳೂರು: ಪರೀಕ್ಷೆ ಬರೆದು ಒಳ್ಳೆಯ ಹುದ್ದೆಗೆ ಸೇರಬೇಕು ಅಂತ ವಿದ್ಯಾರ್ಥಿಗಳು ಪರೀಕ್ಷಾ ಸೆಂಟರ್ ಹುಡುಕುತ್ತಾ ಬೇರೆ ಬೇರೆ ಊರಿಗೆ ಹೋಗುತ್ತಾ ಇರುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದಾಗ ರೈಲು ವ್ಯತ್ಯಯದಿಂದ ತನ್ನ ಪರೀಕ್ಷೆಯನ್ನು ಮಿಸ್ ಮಾಡಿಕೊಂಡಿದ್ದಾನೆ
ರೋಹಿತ್ ಸಿಂಗ್ ರಾವತ್ ಎಂಬ ಯುವಕ ರಾಜಸ್ತಾನದಿಂದ ಬಂದು ಬೆಂಗಳೂರಿನಿಂದ ಮಂಗಳೂರಿಗೆ ಟ್ರೈನ್ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮಂಗಳೂರಿನ ಅಬ್ಬಕ್ಕ ಸರ್ಕಲ್ ಬಳಿ ಖಾಸಗಿ ಕಾಲೇಜಿನಲ್ಲಿ ಏರ್ ಫೋರ್ಸ್ ಪರೀಕ್ಷೆ ಬರೆಯಬೇಕಿತ್ತು. ಭೂಕುಸಿತದ ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಸುಮಾರು 4 ಗಂಟೆಗಳ ಕಾಲ ಸಂಚಾರ ವ್ಯತ್ಯಯ ಉಂಟಾಗಿ ಪರೀಕ್ಷೆಗೆ ಹೋಗುವ ಸಾಕಷ್ಟು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಪರದಾಡಿದ್ದಾರೆ. ಈ ಬಗ್ಗೆ ವಿದ್ಯಾರ್ಥಿ ರೋಹಿತ್ ಸಿಂಗ್ ರಾವತ್ X ಖಾತೆಯಲ್ಲಿ ಬೇಸರ ಹೊರ ಹಾಕಿದ್ದಾರೆ.
ನನ್ನ ರೈಲು 16511, 4517259154 (Blr to mangalore) 4 ಗಂಟೆ ತಡವಾಗಿ ಚಲಿಸುತ್ತಿದೆ. ಇದರಿಂದಾಗಿ ನಾನು ನನ್ನ ಪರೀಕ್ಷಾ ಕೇಂದ್ರವನ್ನು ತಲುಪಲು ಸಾಧ್ಯವಾಗುವುದಿಲ್ಲ. ಇದಕ್ಕೆ ಯಾರು ಹೊಣೆ? ಎಂದು ಪೋಸ್ಟ್ ಹಾಕಿದ್ದಾರೆ. ಇದೇ ಟ್ವೀಟ್ ನೋಡಿದ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಸಿಬ್ಬಂದಿ ರೀ ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಈ ರೈಲಿನಲ್ಲಿ ಎಷ್ಟು ಅಭ್ಯರ್ಥಿಗಳು ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಒದಗಿಸುವಿರಾ? ನಾವು ಮಂಗಳೂರಿನ ಸಂಸದರ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ಕ್ರಮಗಳಿಗೆ ಮನವಿ ಮಾಡಿದ್ದೇವೆ. ಹೆಚ್ಚಿನ ವಿವರಗಳನ್ನು ಒದಗಿಸುವ ಮೂಲಕ ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಭರವಸೆ ನೀಡಿದೆ.