ಕರಾವಳಿ

ಭೀಕರ ರಸ್ತೆ ಅಪಘಾತ..ದುಬೈ ಏರ್‌ಪೋರ್ಟ್‌ ಅಧಿಕಾರಿ, ಮಂಗಳೂರು ಮೂಲದ ಯುವತಿ ದಾರುಣ ಸಾವು

Views: 168

ಮಂಗಳೂರು: ದುಬೈನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಯುವತಿ‌ ಸಾವನ್ನಪ್ಪಿದ್ದಾರೆ. ಉಳ್ಳಾಲ ತಾಲೂಕಿನ ಕೋಟೆಕಾರ್‌ನ ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ ಮೃತ ದುರ್ದೈವಿ.

ಮಂಗಳೂರು ತಾಲೂಕು ಪಂಚಾಯತ್‌ನ ಮಾಜಿ ಉಪಾಧ್ಯಕ್ಷೆ ರಾಜೀವಿ ಹಾಗೂ ವಿಠಲ್ ಕುಲಾಲ್ ಅವರ ಏಕೈಕ ಪುತ್ರಿ ವಿದಿಶಾ. ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ 28 ವರ್ಷದ ವಿದಿಶಾ, 2019 ರಿಂದ ದುಬೈ ಏರ್‌ಪೋರ್ಟ್‌ನ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.

ಪ್ರತಿದಿನ ಕಂಪನಿ ಕಾರಿನಲ್ಲೇ ಮನೆಯತ್ತ ತೆರಳುತ್ತಿದ್ದ ವಿದಿಶಾಗೆ ಕಾರ್ ಮಿಸ್ ಆಗಿರೋದ್ರಿಂದ ತನ್ನ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಆಗ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಕಾರು ಅಪಘಾತದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ವಿದಿಶಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

Related Articles

Back to top button
error: Content is protected !!