ಸಾಂಸ್ಕೃತಿಕ

ಭೀಕರ ಅಪಘಾತಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ದರ್ಶನ್ ಅಭಿಮಾನಿ

Views: 225

ಮೈಸೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದ ಬಳಿ ನಡೆದಿದೆ.

ರವಿ (23) ಮೃತ ಬೈಕ್ ಸವಾರ. ಮೃತ ರವಿ ನರಸೀಪುರ ಪಟ್ಟಣದ ವಿನಾಯಕ ಕಾಲೋನಿ ನಿವಾಸಿ ಆಗಿದ್ದರು. ಸ್ಥಳಕ್ಕೆ ಬನ್ನೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಮೃತ ರವಿಯ ಟಿಶರ್ಟ್ ಮೇಲೆ ಜೈಲು ಸೇರಿರುವ ನಟ ದರ್ಶನ್ ಅವರ ಫೋಟೋ ಇದ್ದು, ದರ್ಶನ್ ಅಭಿಮಾನಿ ಆಗಿದ್ದರು ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಮುಂಭಾಗ ಕುಟುಂಬಸ್ಥರು ದೌಡಾಯಿಸಿದ್ದಾರೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!