ಕರಾವಳಿ
ಬ್ರಹ್ಮಾವರ: ಸ್ಕೂಟಿ ಲಾರಿ ಡಿಕ್ಕಿ, ಸವಾರ ಸಾವು

Views: 171
ಬ್ರಹ್ಮಾವರ ಹೇರೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕೂಟಿ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಡೆದಿದೆ.
ಮೃತರನ್ನು ಹೇರೂರು ನಿವಾಸಿ ಕೃಷ್ಣ ಗಾಣಿಗ ಎಂದು ತಿಳಿಯಲಾಗಿದೆ
ಉಡುಪಿಯಿಂದ ಬ್ರಹ್ಮಾವರಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು. ರಸ್ತೆ ಕಾಮಗಾರಿ ಯಿಂದಾಗಿ ಸಂಚಾರ ಅಸ್ತವ್ಯಸ್ತ ಉಂಟಾಗಿ ರಸ್ತೆಯನ್ನು ಏಕ ಪಥಕ್ಕೆ ಇಳಿಸಿದ್ದರಿಂದ ಸ್ಕೂಟಿ ಸವಾರ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೃಷ್ಣ ಅವರು ಉಡುಪಿ ನಗರ ಪಾಲಿಕೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ