ಬ್ರಹ್ಮಾವರ: ನೀಲಾವರದ ಮನೆಯೊಂದರಲ್ಲಿ ಅಂದರ್ ಬಾಹರ್ ಜುಗಾರಿ: 11 ಮಂದಿ ಅರೆಸ್ಟ್

Views: 126
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರದ ಸಮೀಪ ನೀಲಾವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಮನೆಯಲ್ಲಿ ಹಣವನ್ನು ಪಣವನ್ನಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬ್ರಹ್ಮಾವರ ಪೊಲೀಸ್ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆರೋಪಿಗಳಾದ ಸದಾಶಿವ ದೇವಾಡಿಗ(48), ನೀಲಾವರ ಗ್ರಾಮ, ಬ್ರಹ್ಮಾವರ, 2) ಪ್ರಸನ್ನ(43), 52 ಹೇರೂರು ಗ್ರಾಮ, ಬ್ರಹ್ಮಾವರ, 3) ರಜಾಕ್(55), 52 ಹೇರೂರು ಗ್ರಾಮ, ಬ್ರಹ್ಮಾವರ, 4) ಭಾಸ್ಕರ(48), ಕನ್ನಾರು ಪೇತ್ರಿ ಅಂಚೆ, ಚೇರ್ಕಾಡಿ ಗ್ರಾಮ, ಬ್ರಹ್ಮಾವರ, 5) ಅಶೋಕ(47), ಉದ್ದಿನಹಿತ್ಲು ಕೊಡವೂರು ಗ್ರಾಮ, ಉಡುಪಿ, 6) ಹರೀಶ್ ನಾಯ್ಕ(35), ತೆಂಕನಿಡಿಯೂರು ಗ್ರಾಮ, ಉಡುಪಿ, 7) ಚಂದ್ರಹಾಸ(40), ಹನಮಂತ ನಗರ, ಪುತ್ತೂರು ಗ್ರಾಮ, ಉಡುಪಿ, 8) ರವಿಕುಮಾರ(57), ಬೇಳೂರು ಗ್ರಾಮ, ಕುಂದಾಪುರ, 9) ಶಶಿಕಾಂತ(36), ಪೇತ್ರಿ ಅಂಚೆ, ಚೇರ್ಕಾಡಿ ಗ್ರಾಮ, ಬ್ರಹ್ಮಾವರ, 10) ಆನಂದ ಕೋಟ್ಯಾನ(63), ಕುಕ್ಕುಂಜೆ, ಸಂತೆಕಟ್ಟೆ ಅಂಚೆ, ಶಿವಳ್ಳಿ ಗ್ರಾಮ, ಉಡುಪಿ, 11) ಸಂಪತ್(37), ಚೇರ್ಕಾಡಿ ಗ್ರಾಮ, ಬ್ರಹ್ಮಾವರ ಎಂಬವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಆರೋಪಿಗಳು ಹಣವನ್ನು ಪಣವನ್ನಾಗಿ ಇಟ್ಟುಕೊಂಡು ಅಂದರ್ ಬಾಹರ್ ಇಸ್ಫಿಟ್ ಜುಗಾರಿ ಆಡುತ್ತಿರುವ ಬಗ್ಗೆ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ.
ನಂತರ ಆರೋಪಿಗಳಿಂದ ಅಂದರ್-ಬಾಹರ್ ಆಟಕ್ಕೆ ಬಳಸಿದ ತಲಾ ಒಟ್ಟು ನಗದು ರೂ. 20,900/-, ಇಸ್ಪೀಟು ಎಲೆಗಳು-52, ಫೈಬರ್ ರೌಂಡ್ ಟೇಬಲ್-1, ಪ್ಲಾಸ್ಟಿಕ್ ಕುರ್ಚಿಗಳು-12, ಮೊಬೈಲ್ ಪೋನ್ ಗಳು,ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ಸ್ವಾಧೀನಕ್ಕೆ ಪಡೆದು ಕೊಂಡು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.






