ಇತರೆ
ಬೈಂದೂರು:ಪತ್ನಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆ,ಪ್ರೇಯಸಿ ಜೊತೆ ಪತಿ ಆತ್ಮಹತ್ಯೆ, ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ
Views: 80
ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆಯಲ್ಲಿ ಇಡೀ ತಾಲೂಕನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣವೊಂದು ಜೋಡಿ ಶವದೊಂದಿಗೆ ಅಂತ್ಯವಾಗಿದೆ. ಗರ್ಭಿಣಿ ಪತ್ನಿಗೆ ನರ್ಸ್ ರೂಪದಲ್ಲಿದ್ದ ಪ್ರೇಯಸಿ ಮೂಲಕ ವಿಷದ ಇಂಜೆಕ್ಷನ್ ಕೊಡಿಸಿ ಕೊಲೆಗೆ ಯತ್ನಿಸಿದ್ದ ಆರೋಪಿ ವಿಠಲ ನಾಯ್ಕ್ ಮತ್ತು ಆತನ ಪ್ರೇಯಸಿ ಭವ್ಯ ಅವರ ಕೊಳೆತ ಮೃತದೇಹಗಳು ಸೌಪರ್ಣಿಕಾ ನದಿ ಸಮೀಪದ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಪ್ರಕರಣ ದಾಖಲಾಗಿ 20 ದಿನಗಳಿಂದ ನಾಪತ್ತೆಯಾಗಿದ್ದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಇದರ ಹಿಂದೆ ಬೇರೇನಾದರೂ ರಹಸ್ಯವಿದೆಯೇ? ಮಗನನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ವೃದ್ಧ ತಾಯಿಯ ಕರುಣಾಜನಕ ಸ್ಥಿತಿ. ಅವರಿಬ್ಬರೂ ನಾಪತ್ತೆಯಾಗಿದ್ದು, ಯಾವ ದಾರಿಯಲ್ಲಿ ಹೋದರು ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ತಾಯಿ ಅಳುತ್ತಿದ್ದಾರೆ.






