ಇತರೆ
ಬ್ರಹ್ಮಾವರ ಅಂಗಡಿಯಲ್ಲಿ ಕೆಲಸಕ್ಕಿದ್ದವರಿಂದಲೇ ಕಳ್ಳತನ, ಮಾಲಕ ದೂರು

Views: 111
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ಆಕಾಶವಾಣಿ ಬಳಿಯಲ್ಲಿರುವ ಮಟನ್ ಸ್ಟಾಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಶಾಭಾಜ್ ಮತ್ತು ಸಲೀಂ ಅವರು ಹಣ ವಂಚನೆ ಮತ್ತು ಕಳವು ಮಾಡಿರುವುದಾಗಿ ಮಾಲಕ ಸಾಧಿಕ್ ಸನಾಉಲ್ಲಾ ಸಾಹೇಬ್ ದೂರು ದಾಖಲಿಸಿದ್ದಾರೆ.
ಕುರಿ ಖರೀದಿಗಾಗಿ ನೀಡಿದ್ದ 3,11,000 ರೂಪಾಯಿ ವಂಚಿಸಿದ್ದು, ಡ್ರಾಯರ್ ನಲ್ಲಿ ಇಟ್ಟಿದ್ದ 1,49,000 ರೂ. ಮತ್ತು 20 ಸಾವಿರ ರೂಪಾಯಿ ಮೌಲ್ಯದ ಸ್ಕೂಟಿಯನ್ನು ಕದ್ದುಕೊಂಡು ಹೋಗಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.