ಸಾಂಸ್ಕೃತಿಕ

‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಬ್ರಹ್ಮಾವರದ ರಾಜರಾಮ್ ಭಟ್ ಜೊತೆ ದಾಂಪತ್ಯ ಜೀವನಕ್ಕೆ

Views: 250

ಕನ್ನಡ ಕರಾವಳಿ ಸುದ್ದಿ: ಬ್ರಹ್ಮಗಂಟು ಕನ್ನಡ ಧಾರಾವಾಹಿಯಲ್ಲಿ ನಟಿಸಿ ಭಾರೀ ಖ್ಯಾತಿ ಗಳಿಸಿದಂತಹ ನಟಿ ಗೀತಾ ಭಾರತಿ ಭಟ್ ಬ್ರಹ್ಮಾವರದ ರಾಜರಾಮ್ ಭಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗಾಯಕಿಯೂ ಆಗಿರುವ ಗೀತಾ ಬಿಗ್‌ಬಾಸ್ ಕನ್ನಡ ಸೀಸನ್-8ರ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ನಟಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಅಮೃತಧಾರೆ ಯಲ್ಲಿ ನಟಿಸುತ್ತಿದ್ದಾರೆ.

ನಟಿಯ ಮದುವೆ ಫೋಟೋಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದೀಗ ಮೆಚ್ಚಿನ ನಟಿಗೆ ಫ್ಯಾನ್ಸ್‌ ವಿಶ್‌ ಮಾಡುತ್ತಿದ್ದಾರೆ.

ಅವರಿಗೆ ಸಿನಿಮಾದಲ್ಲೇ ಬಾಡಿ ಶೇಮಿಂಗ್ ಮಾಡಲಾಗಿದೆಯಂತೆ. ಈ ಬಗ್ಗೆ ಅವರು ಸಂದರ್ಶನದಲ್ಲಿ ಆರೋಪಿಸಿದ್ದರು. ಗೀತಾ ಭಾರತಿ ಭಟ್ ಗುಂಡಮ್ಮ ಅಂತಲೇ ಕಿರುತೆರೆಯಲ್ಲಿ ಫೇಮಸ್ ಆಗಿದ್ದರು.

 

Related Articles

Back to top button