ಇತರೆ
ಬೈಕ್- ಕೆಎಸ್ಆರ್ಟಿಸಿ ಬಸ್ ಡಿಕ್ಕಿ:ತಂದೆ, ಇಬ್ಬರು ಪುಟ್ಟ ಮಕ್ಕಳು ಸಾವು

Views: 179
ಕನ್ನಡ ಕರಾವಳಿ ಸುದ್ದಿ:ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿ ತಂದೆ ಹಾಗೂ ಇಬ್ಬರು ಪುಟ್ಟ ಮಕ್ಕಳು ಮೃತಪಟ್ಟ ಘಟನೆ ರಾಮನಗರದ ಅಚಲು ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.
ಕನಕಪುರ-ರಾಮನಗರ ಹೆದ್ದಾರಿಯಲ್ಲಿನ ಅಚಲು ಗ್ರಾಮದ ಸಮೀಪ ಟಿವಿಎಸ್ ಬೈಕ್ನಲ್ಲಿ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ತೆರಳುತ್ತಿದ್ದರು. ಈ ವೇಳೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಮಗ, ಮಗಳು ಹಾಗೂ ತಂದೆ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ.






