ಕರಾವಳಿ

ಬೈಕಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಉಪನ್ಯಾಸಕಿ ಮೃತ್ಯು

Views: 207

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪ  ಸೆ.6 ರಂದು ಬೈಕ್ ನಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅತಿಥಿ ಉಪನ್ಯಾಸಕಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ಸುಳ್ಯದ ಬೀರಮಂಗಲ ನಿವಾಸಿ, ಬಂಟ್ವಾಳದ ಕಾಮಾಜೆ ಸರಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಡಾ.ಅಚ್ಚುತ ಪೂಜಾರಿಯವರ ಪತ್ನಿ ಸುನಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸೆ.6ರಂದು ತಮ್ಮ ಕುಟುಂಬದ ತರವಾಡು ಮನೆ, ಈಶ್ವರಮಂಗಲದ ಮೇನಾಲಕ್ಕೆ ಸಂಬಂಧಿಕರೊಬ್ಬರ ಬೈಕಲ್ಲಿ ಹೋಗುತ್ತಿರುವಾಗ ಮಳೆ ಬಂದ ಕಾರಣಕ್ಕಾಗಿ ಕೊಡೆ ಬಿಡಿಸಿದ ಸಂದರ್ಭದಲ್ಲಿ, ಗಾಳಿಗೆ ಕೊಡೆ ಎಳೆಯಲ್ಪಟ್ಟು ಇವರು ಬೈಕಿಂದ ಜಾರಿ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು  ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆ ಬಳಿಕ ಆಪರೇಶನ್ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ತಡ ರಾತ್ರಿ ಇಹಲೋಕ ತ್ಯಜಿಸಿದರು ಎಂದು ತಿಳಿದುಬಂದಿದೆ.

 

Related Articles

Back to top button
error: Content is protected !!