ಬೆಳ್ತಂಗಡಿ ಹೆಜ್ಜೇನು ದಾಳಿ,ಬಾಲಕನನ್ನು ರಕ್ಷಿಸಿದ ಪಂಚಾಯತ್ ಸಿಬ್ಬಂದಿ

Views: 182
ಬೆಳ್ತಂಗಡಿ: ಮೇಲಂತ ಬೆಟ್ಟು ಗ್ರಾಮ ಪಂಚಾಯಿತಿ ಬಳಿ ಹೆಜ್ಜೇನು ಜನರ ಮೇಲೆ ದಾಳಿ ಮಾಡಿತು ಜನ ಭಯದಿಂದ ಓಡಿಹೋಗಿದ್ದಾರೆ.ಸುತ್ತ ಮುತ್ತಲಿನ ಮನೆಯವರು ಭಯದಿಂದ ಮನೆಬಾಗಿಲು ಮುಚ್ಚಿಕೊಂಡಿದ್ದಾರೆ.
8ನೇ ತರಗತಿ ವಿದ್ಯಾರ್ಥಿ ತೀರ್ಥೇಶ್ ಮೇಲಂತ ಬೆಟ್ಟು ಶಾಲೆಯಿಂದ ಮನೆ ಕಡೆಗೆ ಬರುತಿದ್ದ ವೇಳೆ ಇವರ ಮೇಲೆ ತೀವ್ರವಾಗಿ ಹೆಜ್ಜೇನು ದಾಳಿ ನಡೆಸಿತು.ರಕ್ಷಣೆಗಾಗಿ ಕೆಲ ಮನೆಗಳ ಕಾದು ತಟ್ಟಿದ್ದಾನೆ. ಆದರೆ ಮನೆ ಬಾಗಿಲು ಮುಚ್ಚಿತ್ತು.
ಹೆಜ್ಜೇನು ದಾಳಿಯಿಂದ ನೋವು ಉರಿ ತಾಳಲಾರದೆ ಅತ್ತು ಕರೆದರೂ ರಕ್ಷಣೆಗೆ ಯಾರು ಇಲ್ಲದಾಗ ಕೊನೆಗೆ ಉಪಾಯ ಇಲ್ಲದೆ ಪಂಚಾಯತ್ ಬಳಿ ಓಡಿದಾಗ ಪಂಚಾಯತ್ ಲೈಬ್ರೇರಿಯನ್ ಸಿಬ್ಬಂದಿಯಾದ ಚಂದ್ರಾವತಿ ಯೋಗೀಶ್ ಪೂಜಾರಿ ಅವರು ಬಂದು ಮುಚ್ಚಿದ್ದ ಬಾಗಿಲನ್ನು ತೆರೆದು ಬಾಲಕನನ್ನು ಪಂಚಾಯತ್ ಒಳಗೆ ಕರೆದುಕೊಂಡು ಹೋದರು ಆದರೂ ಬೆನ್ನು ಬಿಡದ ಹೆಜ್ಜೇನು ಅಲ್ಲಿಯೂ ದಾಳಿ ಮಾಡಿತು.ಮುಂದಕ್ಕೆ ಅಧ್ಯಕ್ಷರ ಕೊಠಡಿಯ ಒಳಗೆ ಹೋಗಿ ಬಾಗಿಲು ಮುಚ್ಚಿ ನೋಡಿದಾಗ ಅಲ್ಲಿಯೂ ಕೂಡ ಹೆಜ್ಜೇನು ಇದ್ದು ದಾಳಿ ಮಾಡಿತು.ಮತ್ತೆ ಚಂದ್ರಾವತಿಯವರು ಹಿಡಿಸೂಡಿ ಸಹಾಯದಿಂದ ಬಹಳಷ್ಟು ಸಂಖ್ಯೆಯಲ್ಲಿ ಇದ್ದ ಹೆಜ್ಜೇನನ್ನು ಕೊಂದು ಬಾಲಕನ ಬಟ್ಟೆ ಬಿಚ್ಚಿಸಿ ಹೆಜ್ಜೇನು ಮುಳ್ಳನ್ನು ತುರ್ತಾಗಿ ತೆಗೆದು ಮನೆಯವರಿಗೆ ಸುದ್ದಿ ಮುಟ್ಟಿಸಿದರು. ನಂತರ ಬಾಲಕನನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಬಾಲಕ ಈಗ ಅರೋಗ್ಯದಿಂದ ಇದ್ದು ಚೇತರಿಸಿ ಕೊಳ್ಳುತ್ತಿದ್ದಾನೆ.






