ಕರಾವಳಿ
ಪಣಂಬೂರು ಬೀಚ್ ನಲ್ಲಿ ಪುರುಷ, ಮಹಿಳೆಯ ಶವ ಪತ್ತೆ: ಆತ್ಮಹತ್ಯೆ ಶಂಕೆ!

Views: 0
ಮಂಗಳೂರು: ಪಣಂಬೂರು ಸಮುದ್ರ ತೀರದಲ್ಲಿ ಬೆಂಗಳೂರು ಮೂಲದ ಪುರುಷ ಮತ್ತು ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಮೃತರನ್ನು ಬೆಂಗಳೂರು ನಿವಾಸಿಗಳಾದ ಲಕ್ಷ್ಮಿ (43) ಮತ್ತು ಬೋರಲಿಂಗಯ್ಯ (50) ಎಂದು ಗುರುತಿಸಲಾಗಿದ್ದು, ಅವರಿಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ ಸಮುದ್ರ ತೀರದಲ್ಲಿ ಇಬ್ಬರ ಮೃತ ದೇಹಗಳು ಕಂಡು ಬಂದಿದ್ದು, ಪಣಂಬೂರು ಪೊಲೀಸರ ಉಪಸ್ಥಿತಿಯಲ್ಲಿ ಸ್ಥಳೀಯ ಜೀವ ರಕ್ಷಕರ ಸಹಾಯದಿಂದ ಮೃತದೇಹಗಳನ್ನು ಸಮುದ್ರದಿಂದ ಮೆಲಕ್ಕೆತ್ತಿ ಶವಾಗಾರಕ್ಕೆ ರವಾನಿಸಲಾಯಿತು.