ಕರಾವಳಿ

ಬೆಂಗಳೂರು ಕಂಬಳ ರೋಚಕ: ಫೈನಲ್ನಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣಗಳು 

Views: 0

ಬೆಂಗಳೂರು: ಕಳೆದರೆಡು ದಿನದಿಂದ ಸಿಲಿಕಾನ್ ಸಿಟಿ ಜನರನ್ನ ಮೈನವಿರಿಳಿಸಿದ್ದ ಕರಾವಳಿ ಕಂಬಳಕ್ಕೆ ಅದ್ದೂರಿ ತೆರೆ ಬಿದ್ದಿದೆ. 6 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 158 ಜೊತೆ ಕಂಬಳದ ಕೋಣಗಳು ಭಾಗಿಯಾಗಿದ್ದವು. ಶನಿವಾರ ಬೆಳಗ್ಗೆ ಆರಂಭವಾಗಿದ್ದ ಕಂಬಳಕ್ಕೆ ಸೋಮವಾರ ಬೆಳಗ್ಗಿನ ಜಾವ 4 ವೇಳೆಗೆ ತೆರೆ ಬಿದ್ದಿದೆ.

6 ವಿಭಾಗಗಳ ಪೈಕಿ ಕನಹಲಗೆ ವಿಭಾಗದಲ್ಲಿ, ಬೊಳ್ಳಂಬಳ್ಳಿಯ ಶ್ರೀರಾಮಚೈತ್ರ ಪರಮೇಶ್ವರ ಭಟ್ ಕೋಣಗಳು, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಕೋಣ, ಹಗ್ಗ ಕಿರಿಯ ವಿಭಾಗದಲ್ಲಿ ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯಾ ಪೂಜಾರಿ ಕೋಣಗಳು, ನೇಗಿಲ ಹಿರಿಯ ವಿಭಾಗದಲ್ಲಿ ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ ಕೋಣಗಳು, ನೇಗಿಲ ಕಿರಿಯ ವಿಭಾಗದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣಗಳು ಗೆಲ್ಲುವ ಮೂಲಕ ಬೆಂಗಳೂರಿಲ್ಲಿ ಇತಿಹಾಸ ನಿರ್ಮಿಸಿದವು. ಇದರ ಜೊತೆ ಅಡ್ಡ ಹಲಗೆ ವಿಭಾಗದ ಫೈನಲ್ ಪಂದ್ಯ ಸಾಕಷ್ಟು ರೋಚಕತೆಗೆ ಕಾರಣವಾಯಿತು.

 

Related Articles

Back to top button