ಕರಾವಳಿ
ಬೆಂಗಳೂರಿನಿಂದ ಮುರ್ಡೆಶ್ವರಕ್ಕೆ ಹೋಗುವ ರೈಲಿನಲ್ಲಿ ಕೊಲೆ: ಆರೋಪಿ ಸೆರೆ

Views: 262
ಉಡುಪಿ: ರೈಲ್ವೇ ಬೋಗಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದ ವ್ಯಕ್ತಿ ಅನಂತರ ಮೃತಪಟ್ಟಿರುವ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೊಲೆಯ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸಿದ ಪೊಲೀಸರು ಮಂಗಳವಾರ ಆರೋಪಿ ಹರಿಯಾಣ ಮೂಲದ ರಾಹುಲ್‌ನನ್ನು ಗುಜರಾತ್‌ನ ಪರ್ದಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ ಬಂಧಿಸಿದ್ದಾರೆ.
ಕೊಲೆಯಾದ ವ್ಯಕ್ತಿ ಚಿಕ್ಕಬಳ್ಳಾಪುರ ಕುಮಾರ್‌ಪೇಟೆಯ ಮೌಜಾಮ್ (35) ಎಂದು ತಿಳಿದುಬಂದಿದೆ.
ರಾಹುಲ್ ನ. 14ರಂದು ಗುಜರಾತ್‌ನ ಕಾಲೇಜು ಯುವತಿಯೊಬ್ಬಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದು, ಅಲ್ಲಿ ತನಿಖೆ ನಡೆಸಿದಾಗ ಈತ ಬೆಂಗಳೂರಿನಿಂದ ಮುರ್ಡೆಶ್ವರಕ್ಕೆ ಹೋಗುವ ರೈಲಿನಲ್ಲಿ ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದ. ಈತ ಮೇನಲ್ಲಿ ಜೈಲಿನಿಂದ ಹೊರಬಂದಿದ್ದ ಈತ ವಿವಿಧ ರಾಜ್ಯಗಳಲ್ಲಿ 3 ಅತ್ಯಾಚಾರ ಸಹಿತ 5 ಕೊಲೆ ನಡೆಸಿರುವುದಾಗಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.