ಬೆಂಕಿ ಹಚ್ಚಿಕೊಂಡು ದೊಡ್ಡ ಅನಾಹುತ ಮಾಡಿ, ದೇಶದ ಗಮನ ಸೆಳೆಯುವ ಪ್ಲಾನ್! ಜಸ್ಟ್ ಮಿಸ್..ಸ್ಫೋಟಕ ಸತ್ಯ ಏನು ?

Views: 0
ನವದೆಹಲಿ: ಸಂಸತ್ ಒಳಗೆ ಜಂಪ್ ಮಾಡಿ ಗದ್ದಲ ಸೃಷ್ಟಿಸಿದ ಭದ್ರತಾ ಲೋಪ ಪ್ರಕರಣದ ಸ್ಫೋಟಕ ಸತ್ಯಗಳು ಒಂದೊಂದಾಗೇ ಹೊರಬರ್ತಿವೆ. ಆರೋಪಿಗಳನ್ನು ಬಂಧಿಸಿರುವ ದೆಹಲಿ ಸ್ಪೆಷಲ್ ಸೆಲ್ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ದೆಹಲಿ ಸ್ಪೆಷಲ್ ಸೆಲ್‌ನ 100 ಪೊಲೀಸರು ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಡಿಸೆಂಬರ್ 13ರಂದು ಸಂಸತ್ ಒಳಗೆ ಹಾಗೂ ಹೊರಗೆ ಬಂದಿದ್ದ ಆರೋಪಿಗಳು ಒಟ್ಟು ಏಳು ಸ್ಮೋಕ್ ಬಾಂಬ್‌ಗಳನ್ನು ತಂದಿದ್ದರು. ಏಳರಲ್ಲಿ ನಾಲ್ಕೈದು ಸ್ಮೋಕ್ ಬಾಂಬ್‌ಗಳನ್ನು ಮಾತ್ರ ಆರೋಪಿಗಳು ಬಳಸಿದ್ದಾರೆ. ಸ್ಮೋಕ್ ಬಾಂಬ್ ಹಾಕುವ ಮುನ್ನ ಸಾಕಷ್ಟು ತಯಾರಿ ನಡೆಸಿದ್ದು ಆರೋಪಿಗಳ ತಂಡ ಹಳೆಯ ಪಾರ್ಲಿಮೆಂಟ್ ವೀಕ್ಷಕರ ಗ್ಯಾಲರಿಯ ವಿಡಿಯೋ ನೋಡಿದ್ದರು ಅನ್ನೋ ಮಾಹಿತಿ ಗೊತ್ತಾಗಿದೆ.
ಬೆಂಕಿ ಹಚ್ಚಿಕೊಳ್ಳುವ ಪ್ಲಾನ್ ಫೇಲ್!
ದಾಳಿ ಮಾಡಿರುವ ಆರೋಪಿಗಳು ಅಂದು ಸಂಸತ್ ಬಳಿ ಬೆಂಕಿ ಹಚ್ಚಿಕೊಳ್ಳಲು ಕೂಡ ಪ್ಲಾನ್ ಮಾಡಿದ್ದರು. ಆದರೆ ಬೆಂಕಿ ಜೆಲ್ ಅನ್ನು ಒಳಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಸ್ಮೋಕ್ ಬಾಂಬ್ ಅನ್ನು ಮಾತ್ರ ಶೂನಲ್ಲಿ ಇಟ್ಟುಕೊಂಡು ಹೋಗಿದ್ದರು. ಏನಾದರೂ ದೊಡ್ಡ ಅನಾಹುತ ಮಾಡಿ ದೇಶದ ಗಮನ ಸೆಳೆಯುವುದು ಇವರ ಮಾಸ್ಟರ್ ಪ್ಲಾನ್ ಆಗಿತ್ತು.
ಸಂಸತ್ ಮೇಲೆ ದಾಳಿ ಮಾಡಿದ ಆರೋಪಿಗಳ ಉದ್ದೇಶ ಅರಾಜಕತೆ ಸೃಷ್ಟಿಸುವುದಾಗಿತ್ತು. ಇಡೀ ದೇಶ ಹಾಗೂ ಸರ್ಕಾರದ ಗಮನ ಸೆಳೆಯೋದು ಪ್ರಮುಖ ಉದ್ದೇಶವಾಗಿತ್ತು. ಬಂಧನದಲ್ಲಿರುವ ಲಲಿತ್ ಮೋಹನ್ ಝಾ ಅವರು ತನಿಖೆ ವೇಳೆ ಹೇಳಿಕೆ ನೀಡಿದ್ದು, ನಿರುದ್ಯೋಗದ ಬಗ್ಗೆ ದೇಶ, ಸರ್ಕಾರದ ಗಮನ ಸೆಳೆಯಲು ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾರೆ.
ದೇಶದಲ್ಲಿ ಅರಾಜಕತೆ ಸೃಷ್ಟಿಸಿ, ಸರ್ಕಾರ ತಮ್ಮ ಬೇಡಿಕೆ ಈಡೇರಿಸುವಂತೆ ಮಾಡಬೇಕು ಅನ್ನೋದು ಈ ಆರೋಪಿಗಳ ಪ್ಲಾನ್ ಆಗಿತ್ತು. ಎಲ್ಲಾ ಆರೋಪಿಗಳ ಬ್ರೈನ್ ವಾಷ್ ಮಾಡಿದ್ದು ಆರೋಪಿ ಲಲಿತ್ ಮೋಹನ್ ಝಾ ಎನ್ನಲಾಗಿದೆ. ಬಂಧನದಲ್ಲಿರುವ ಈ ಆರೋಪಿಗಳಿಗೆ ವಿದೇಶದಿಂದ ಫಂಡಿಂಗ್ ಏನಾದರೂ ಬಂದಿದೆಯಾ ಅನ್ನೋ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಶೂಗಳ ಕೆಳಗೆ ಸ್ಮೋಕ್ ಬಾಂಬ್ ಇಡುವಂತೆ ಶೂ ಡಿಸೈನ್ ಮಾಡಿದ್ದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.






