ಬೀಜಾಡಿಯಲ್ಲಿ 10 ದಿನಗಳ ಆರಿ ಎಂಬ್ರಾಯ್ಡರಿ ಕೌಶಲ್ಯ ತರಬೇತಿ ಸಮಾರೋಪ ಸಮಾರಂಭ
Views: 257
ಕನ್ನಡ ಕರಾವಳಿ ಸುದ್ದಿ: ವಿಜಯ ಗ್ರಾಮೀಣ ಪ್ರತಿಷ್ಠಾನ (ರಿ.), ಮಂಗಳೂರು ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸಮೃದ್ಧಿ ಸಂಜೀವಿನಿ ಒಕ್ಕೂಟ ಬೀಜಾಡಿ ಇವರ ಆಯೋಜನೆಯಲ್ಲಿ ಬೀಜಾಡಿ ವಿಜಯ ಗಾಣಿಗ ಅವರ ಮನೆಯ ಸಭಾಂಗಣದಲ್ಲಿ 10 ದಿನಗಳ ಕಾಲ ನಡೆಯುವ ಆರಿ ಎಂಬ್ರಾಯ್ಡರಿ ತರಬೇತಿಯ ಸಮಾರೋಪ ನೆರವೇರಿತು.
ತರಬೇತಿಯ ಶಿಬಿರಾರ್ಥಿಗಳಿಗೆ ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಅವರು ಸ್ವ ಉದ್ಯಮದಲ್ಲಿ ಸಾಧನೆ ಆಗಬೇಕು ಆ ಮೂಲಕ ತಮ್ಮ ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಬಿವಿಟಿಯ ರಾಘವೇಂದ್ರ ಆಚಾರ್ಯ ಕೆದೂರು, ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ನಾಗರತ್ನ ಜಿ, ಸಂಪನ್ಮೂಲ ವ್ಯಕ್ತಿಗಳಾದ ಆರತಿ ಉಪಾಧ್ಯಾಯ, ಸ್ಥಳಾವಕಾಶ ನೀಡಿದ ವಿಜಯ ಗಾಣಿಗ, ತರಬೇತುದಾರೆ ನಿಶ್ಮಿತಾ ತೆಕ್ಕಟ್ಟೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಸುಮಿತ್ರಾ , ಸುಜಾತ,ರಜನಿ, ಶ್ರುತಿ,ಸುಮಾ,ಗೌತಮಿ, ಅನಿತಾ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು. ನೇತ್ರಾವತಿ ಸುಮಾ ಪ್ರಾರ್ಥಿಸಿ, ಪುಷ್ಷಾ ಸ್ವಾಗತಿಸಿ, ನಾಗರತ್ನ ವಂದಿಸಿ, ಎಲ್ ಸಿ ಆರ್ ಪಿ ನೇತ್ರಾವತಿ ಎಲ್ ನಿರೂಪಿಸಿದರು. ಒಟ್ಟು 27 ಮಂದಿ ಫಲಾನುಭವಿಗಳು ಪಾಲ್ಗೊಂಡಿದ್ದರು. ಎಂಬಿಕೆ ರೇಖಾ ಮತ್ತು ಕೃಷಿ ಸಖಿ ಪುಷ್ಪ,ಎಲ್ ಸಿ ಆರ್ ಪಿಯವರು, ವಿಜಯ ಗ್ರಾಮೀಣ ಪ್ರತಿಷ್ಠಾನದ ಸಿಬ್ಬಂದಿ ಪಂಡರಿನಾಥ್ ಸಹಕರಿಸಿದರು.






