ಕರಾವಳಿ
ಬೀಜಾಡಿಯಲ್ಲಿ ಗೂಡ್ಸ್ ವಾಹನ ಹಿಂದಕ್ಕೆ ಚಲಿಸಿ ವೃದ್ಧ ಮಹಿಳೆ ಸಾವು

Views: 95
ಕುಂದಾಪುರ:ಕೋಟೇಶ್ವರ ಸಮೀಪದ ಬೀಜಾಡಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಗೂಡ್ಸ್ ವಾಹನ ಡಿಕ್ಕಿಯಾಗಿ ವೃದ್ಧ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಗೋಪಾಡಿ ನಿವಾಸಿ ಕಮಲ( 81) ಅವರು ಸರ್ವಿಸ್ ರಸ್ತೆ ದಾಟುತ್ತಿದ್ದಾಗ ಗೂಡ್ಸ್ ವಾಹನ ಒಮ್ಮೆಲೇ ಹಿಂದಕ್ಕೆ ಚಲಾಯಿಸಿ ಡಿಕ್ಕಿ ಹೊಡೆದು ಹಿಂದಿನ ಚಕ್ರ ಮಹಿಳೆಯ ದೇಹದ ಮೇಲೆ ಹರಿದ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಕರೆತಂದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.