ಕರಾವಳಿ
“ಬಿಪರ್ ಜಾಯ್” ಚಂಡಮಾರುತ ಕನಾ೯ಟಕ ಕರಾವಳಿ ಭಾಗದಲ್ಲಿ ಹೈ ಅಲಟ್೯

Views: 0
ಕುಂದಾಪುರ : ಅರಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತದಿಂದ ವಾಯುವ್ಯ ಭಾಗದತ್ತ ಸಂಚರಿಸುವ ‘ಬಿಪರ್ ಜಾಯ್’ ಚಂಡಮಾರುತ ಶುಕ್ರವಾರ ಸಂಜೆ ಮತ್ತಷ್ಟು ತೀವೃತೆ ಪಡೆಯಲಿದೆ.
ಈ ಹಿನ್ನೆಲೆಯಲ್ಲಿ ಜೂ. 8 ರಿಂದ 10 ರವರೆಗೆ ಕರಾವಳಿ ಭಾಗದಲ್ಲಿ ಉತ್ತಮ ಮಳೆ ಸುರಿಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ದ. ಕ ಜಿಲ್ಲೆಯಿಂದ ಕರಾವಳಿ ಕರಾವಳಿ ಭಾಗದವರೆಗೆ ಸಂಭಾವ್ಯ ಅನಾಹುತ ತಡೆಗಟ್ಟಲು ಹಾಗೂ ಮುಂಜಾಗೃತ ಕ್ರಮಗಳನ್ನುತೆಗೆದುಕೊಳ್ಳಲು ಮಾಹಿತಿ ರವಾನಿಸಲಾಗಿದೆ.
ಮುಂಗಾರು ವಿಳಂಭ?
ಚಂಡಮಾರುತ ತೀವೃತೆ ಪಡೆದುಕೊಂಡರೆ ಮುಂಗಾರು ಮತ್ತಷ್ಟು ವಿಳಂಭ ಸಾಧ್ಯತೆಯಿದೆ. ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಮುಂಗಾರು ಅಪ್ಪಳಿಸಲು ಇನ್ನಷ್ಟು ದಿನ ತಗುಲಬಹುದು, ಚಂಡ ಮಾರುತ ತೀವ್ರತೆ ಕಡಿಮೆ ನೋಡಿದ ಬಳಿಕ ಮುಂಗಾರು ಘೋಷಣೆಯಾಗುವ ಸಾಧ್ಯತೆ ಇದೆ.







