ಸಾಂಸ್ಕೃತಿಕ

ಬಿಗ್ ಬಾಸ್ ಮಾಜಿ ಸ್ಪರ್ಧಿ ಮ್ಯಾಕ್ಸ್ ಮಂಜು ನಿಶ್ಚಿತಾರ್ಥ: ಹುಡುಗಿ ಯಾರು ಗೊತ್ತಾ!?

Views: 177

ಕನ್ನಡ ಕರಾವಳಿ ಸುದ್ದಿ:ಮ್ಯಾಕ್ಸ್ ಮಂಜು ಅವರು ಸಂಧ್ ಖುಷಿ ಎನ್ನುವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಬಂಧದ ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ. ಹೊಸ ಬಂಧದ ಆರಂಭ ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಮ್ಯಾಕ್ಸ್ ಮಂಜು ಅವರು ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಯಾಗಿದ್ದರು. ಕೊನೆವರೆಗೂ ಪೈಪೋಟಿ ಕೊಟ್ಟಿದ್ದರು. ಬಿಗ್ ಬಾಸ್ನಲ್ಲಿ ಮಗ ಮದುವೆ ಬಗ್ಗೆ ತಂದೆ ಪ್ರಸ್ತಾಪ ಮಾಡಿದ್ದರು. ಅದರಂತೆ ಮ್ಯಾಕ್ಸ್ ಮಂಜು ಅವರ ನಿಶ್ಚಿತಾರ್ಥ ಆಗಿದ್ದು ಇನ್ನೇನು ವಿವಾಹ ಸಂಭ್ರಮವೊಂದು ಬಾಕಿ ಇದೆ. ಇದನ್ನೂ ಸದ್ಯದಲ್ಲೇ ಅಪ್ಡೇಟ್ ಕೊಡಬಹುದು. ಅಲ್ಲಿವರೆಗೆ ಕಾಯಬೇಕು ಅಷ್ಟೇ

ಉಗ್ರಂ ಮಂಜು ಅವರು ಮದುವೆಯಾಗುತ್ತಿರುವ ಹುಡುಗಿ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಉಗ್ರಂ ಮಂಜು ಕೈ ಹಿಡಿಯುತ್ತಿರುವ ಹುಡುಗಿ ಸಂಧ್ಯಾ ಖುಷಿ. ಸ್ಪರ್ಶ್ ಆಸ್ಪತ್ರೆಯಲ್ಲಿ ಸಂಧ್ಯಾ ಅವರು ಅಡ್ಮಿನ್ ಡಿಪಾರ್ಟ್ಮೆಂಟ್‌ನಲ್ಲಿದ್ದಾರೆ. ಇನ್ಸ್ಟಾದಲ್ಲಿ Transplant Coordinator ಎಂದು ಬರೆದುಕೊಂಡಿದ್ದಾರೆ.

Related Articles

Back to top button