ಸಾಂಸ್ಕೃತಿಕ

ಬಿಗ್ಬಾಸ್ ಖ್ಯಾತಿಯ ಶಮಂತ್ ಗೌಡ ಮೇಘನಾ ಜೊತೆಗೆ ನಿಶ್ಚಿತಾರ್ಥ

Views: 171

ಕನ್ನಡ ಕರಾವಳಿ ಸುದ್ದಿ: ಕನ್ನಡ ಬಿಗ್ಬಾಸ್ ಮಾಜಿ ಸ್ಪರ್ಧಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಶಮಂತ್ ಬ್ರೋ ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇಷ್ಟು ದಿನ ಸಿಂಗಲ್ ಆಗಿದ್ದ ಶಮಂತ್ ಬ್ರೋ ಗೌಡ ಇದೀಗ ಜಂಟಿಯಾಗಿದ್ದಾರೆ. ತಮ್ಮ ಅದ್ಭುತ ಅಭಿನಯದ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರೋ ಶಮಂತ್ ಬ್ರೋ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಶಮಂತ್ ಬ್ರೋ ಗೌಡ ತನ್ನ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ನಟ ಶಮಂತ್  ಎಂಗೇಜ್ ಮೆಂಟ್ ಆಗಿದ್ದಾರೆ. ಅದು ಕೂಡ ಪ್ರೀತಿಸಿದ ಹುಡುಗಿ ಜೊತೆಗೆ ಎಂಗೇಜ್ ಆಗಿದ್ದಾರೆ. ಮೇಘನಾ ಗ್ರಾಮ್‌ ಅವರ ಕಾಲೇಜಿನ್‌ ಇವೆಂಟ್‌ವೊಂದರಲ್ಲಿ ಶಮಂತ್‌ ಬ್ರೊ ಗೌಡ ಆಗಮಿಸಿದ್ದರು. ಆ ವೇಳೆ ಶಮಂತ್‌ ಬ್ರೊ ಗೌಡ, ಮೇಘನಾಗೆ ಪರಿಚಯ ಆಗಿತ್ತಂತೆ. ಆಮೇಲೆ ಆ ಪರಿಚಯ ಸ್ನೇಹ ಆಯ್ತು, ಪ್ರೀತಿ ಹುಟ್ಟಿ ಈಗ ಕುಟುಂಬದವರ ಒಪ್ಪಿಗೆ ಪಡೆದು ಈ ಜೋಡಿ ಮದುವೆಯಾಗಲು ರೆಡಿ ಆಗಿದೆ.

ಇನ್ನೂ, ಮೇಘನಾ, ಶಮಂತ್‌ ಬ್ರೊ ಗೌಡಗೆ ಪರಿಚಯ ಆಗಿ ಆರು ವರ್ಷಗಳಿಗೂ ಅಧಿಕ ಕಾಲ ಆಗಿದೆಯಂತೆ. ಶಮಂತ್‌ ಅವರು ಬಿಗ್‌ ಬಾಸ್ ಕನ್ನಡ ಸೀಸನ್‌ 8ʼ ಶೋ ಹೋಗುವ ಮುನ್ನವೇ ಮೇಘನಾರಿಗೆ ಪರಿಚಯ ಆಗಿ ಮೂರು ವರ್ಷಗಳ ಮೇಲಾಗಿತ್ತಂತೆ. ಸದ್ಯ ಇದೀಗ ಕುಟುಂಬಸ್ಥರ ಸಮ್ಮುಖದಲ್ಲಿ ಶಮಂತ್ ಹಾಗೂ ಮೇಘನಾ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

 

Related Articles

Back to top button
error: Content is protected !!