ಧಾರ್ಮಿಕ

ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಪದ್ಮಶಾಲಿ/ಶೆಟ್ಟಿಗಾರ ಸಮಾಜ ಸೇವಾ ಟ್ರಸ್ಟ್: ವಾರ್ಷಿಕ ಮಹಾಸಭೆ ಮತ್ತು ಪದ ಪ್ರಧಾನ ಸಮಾರಂಭ 

Views: 64

play-sharp-fill
ಕನ್ನಡ ಕರಾವಳಿ ಸುದ್ದಿ : ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಒಳಪಟ್ಟ ಶ್ರೀ ಬ್ರಹ್ಮಲಿಂಗ ವೀರಭದ್ರ ಪದ್ಮಶಾಲಿ/ ಶೆಟ್ಟಿಗಾರ ಸಮಾಜ ಸೇವಾ ಟ್ರಸ್ಟ್ ಇದರ ಮೂರನೇ ವಾರ್ಷಿಕ ಮಹಾಸಭೆ ಮತ್ತು ಪದಪ್ರಧಾನ ಸಮಾರಂಭ ಜೂನ್ 1ರಂದು ರವಿವಾರ ನಡೆಯಿತು.

ನೂತನ ಅಧ್ಯಕ್ಷರಾಗಿ ಸುಧಾಕರ ವಕ್ವಾಡಿ, ಕಾರ್ಯದರ್ಶಿಯಾಗಿ ಡಾ. ಶಿವಪ್ರಸಾದ್ ಶೆಟ್ಟಿಗಾರ್ ಉಡುಪಿ, ಕೋಶಾಧಿಕಾರಿಯಾಗಿ ಶ್ರೀಮತಿ ಶೋಭಾ ಅರುಣ್ ಕುಮಾರ್ ಶೆಟ್ಟಿಗಾರ್ ಕೆಳಾರ್ಕಳಬೆಟ್ಟು, ಗೌರವ ಅಧ್ಯಕ್ಷರಾಗಿ ಡಾ.ಗೌತಮ್ ಶೆಟ್ಟಿಗಾರ್ ಬಾರ್ಕೂರು, ಟ್ರಸ್ಟ್ ನ ಸದಸ್ಯರಾಗಿ ವಿಠ್ಠಲ್ ಶೆಟ್ಟಿಗಾರ್ ಕೆಳಾರ್ಕಳಬೆಟ್ಟು, ಚಂದ್ರಶೇಖರ ಶೆಟ್ಟಿಗಾರ್ ಹೊಸಾಳ, ಶ್ರೀಮತಿ ಚಂದ್ರಕಲಾ, ವಿರೇಂದ್ರ ಶೆಟ್ಟಿಗಾರ್ ಬ್ರಹ್ಮಾವರ, ಭಾಲಕೃಷ್ಣ ಶೆಟ್ಟಿಗಾರ್ ವಕ್ವಾಡಿ ಆಯ್ಕೆಯಾದರು.

ದೇವಸ್ಥಾನದ ಆಡಳಿತ ಧರ್ಮದರ್ಶಿ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಅವರು ಟ್ರಸ್ಟ್ ನ ಪದಾಧಿಕಾರಿಗಳಿಗೆ ಪ್ರಮಾಣ ವಿಧಿ ಬೋಧಿಸಿದರು.

ನಂತರ ಅವರು ಮಾತನಾಡಿ, ದೇವಸ್ಥಾನದ ಆಡಳಿತ ಮಂಡಳಿ ವಿವಿಧ ಸಮಿತಿಗಳ ಸಹಕಾರದೊಂದಿಗೆ ದೇವಸ್ಥಾನದ ಸಮಗ್ರ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಿ ಎಂದರು.

ಇದೇ ಸಂದರ್ಭದಲ್ಲಿ 2024-25 ನೇ ಸಾಲಿನಲ್ಲಿ ತೇರ್ಗಡೆಗೊಂಡ ಎಲ್ಲಾ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪ್ರತಿಭಾ ಪುರಸ್ಕಾರಕ್ಕೆ ದೇಣಿಗೆ ನೀಡಿದ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಹಾಗೂ ಪುರುಷೋತ್ತಮ್ ಶೆಟ್ಟಿಗಾರ್ ಮಣಿಪಾಲ, ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅನ್ನದಾನದ ಸೇವಾಕರ್ತರಾದ ಶ್ರೀಮತಿ ಪೂರ್ಣಿಮಾ ಮತ್ತು ಭಾಸ್ಕರ್ ಶೆಟ್ಟಿಗಾರ್ ಮುಂಬೈ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು

ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಜಯರಾಮ್ ಶೆಟ್ಟಿಗಾರ್, ವೀರೇಶ್ವರ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿಗಾರ್ ಮಣಿಪಾಲ, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಸದಾಶಿವ ಶೆಟ್ಟಿಗಾರ್ ಬ್ರಹ್ಮಾವರ, ಯುವ ವೇದಿಕೆ ಅಧ್ಯಕ್ಷ ಸಂಜೀವ ಶೆಟ್ಟಿಗಾರ ಸಾಸ್ತಾನ, ಸಂಘಟನಾ ಸಮಿತಿ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ ಸಂತೆಕಟ್ಟೆ, ನಾರಾಯಣ ಶೆಟ್ಟಿಗಾರ್ ಸುರತ್ಕಲ್, ಕಾರ್ಯದರ್ಶಿ ಜನಾರ್ದನ್ ಶೆಟ್ಟಿಗಾರ ಚೇರ್ಕಾಡಿ ಉಪಸ್ಥಿತರಿದ್ದರು.

Related Articles

Back to top button
error: Content is protected !!