ಸಾಂಸ್ಕೃತಿಕ
ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಫೋಟೋ ಮಾರ್ಫ್ ಮಾಡಿ ಕಿರುಕುಳ: ಯುವತಿ ವಿರುದ್ಧ ದೂರು
Views: 47
ಕನ್ನಡ ಕರಾವಳಿ ಸುದ್ದಿ:ಕಾಂತಾರದ ಕನಕವತಿಗೆ ಕಾಡಿದ್ದ ಸೋಶಿಯಲ್ ಮೀಡಿಯಾ ಕಿರಾತಕರು ಇದೀಗ ಮತ್ತೊಬ್ಬ ನಟಿಯ ಬೆನ್ನುಬಿದ್ದಿದ್ದಾರೆ.

ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಅವರ ಫೋಟೋ ಮಾರ್ಫ್ ಮಾಡಿ ಕಿರುಕುಳ ನೀಡಿದ್ದಾರೆ. ರುಕ್ಮಿಣಿ ಹೆಸರಿನಲ್ಲಿ ಹಲವರಿಗೆ ವ್ಯಕ್ತಿಯೊಬ್ಬ ಕರೆ ಮತ್ತು ಮೆಸೇಜ್ ಮಾಡಿರೋದು ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್‌ಗೆ ಸೋಶಿಯಲ್ ಮೀಡಿಯಾ ಮೂಲಕ ಕಿರುಕುಳ ಕೊಟ್ಟಿರೋ ವಿಚಾರ ಬೆಳಕಿಗೆ ಬಂದಿದೆ. ಅನುಪಮಾರ ಫೋಟೋ ಮಾರ್ಫ್ ಮಾಡಿ ಫೇಕ್ ಅಕೌಂಟ್‌ನಲ್ಲಿ ಮಾನಹಾನಿ ಪೋಸ್ಟ್ ಹಾಕಿರೋದನ್ನು ಅವರೇ ಹೇಳಿಕೊಂಡಿದ್ದಾರೆ.22 ವರ್ಷದ ಯುವತಿಯಿಂದ ಪೋಸ್ಟ್.. ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಸದ್ಯ ಅನುಪಮಾ ನೀಡಿರೋ ದೂರನ್ನು ಆಧರಿಸಿ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಈ ರೀತಿಯ ಕುಕೃತ್ಯ ಮಾಡೋರು ಯುವತಿಯೇ ಆಗಿರಲಿ.. ಯುವಕರೇ ಆಗಿರಲಿ.. ಇನ್ನೊಬ್ಬರ ಮಾನಹರಣ ಮಾಡುವ ಸೋಶಿಯಲ್ ಮೀಡಿಯಾ ಶೂರರಿಗೆ ಪೊಲೀಸರು ತಕ್ಕ ಪಾಠ ಕಲಿಸಬೇಕಿದೆ.






