ಶಿಕ್ಷಣ

ಬಸ್ರೂರು ಶ್ರೀ ಶಾರದಾ ಕಾಲೇಜು: ವೃತ್ತಿ ಮತ್ತು ಭವಿಷ್ಯದಲ್ಲಿ ಉದ್ಯೋಗ ಅವಕಾಶಗಳು ಕಾರ್ಯಕ್ರಮ

"ಅರ್ಥಶಾಸ್ತ್ರ ಕೇವಲ ಹಣಕಾಸು ಮತ್ತು ಮಾರುಕಟ್ಟೆಗಳ ಅಧ್ಯಯನ ಮಾತ್ರವಲ್ಲದೆ ಶೈಕ್ಷಣಿಕ, ಸಂಶೋಧನಾ ಕ್ಷೇತ್ರ, ಬ್ಯಾಂಕಿಂಗ್, ಡೇಟಾ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಅವಕಾಶಗಳಿದ್ದು ವಿದ್ಯಾರ್ಥಿಗಳು ಪದವಿ ಹಂತದಲ್ಲಿಯೇ ಈ ಬಗ್ಗೆ ಸರಿಯಾದ ಅಧ್ಯಯನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು"----ಶ್ರೀ ಕಿಶನ್, ಅರ್ಥಶಾಸ್ತ್ರ ಉಪನ್ಯಾಸಕರು.

Views: 19

ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಕಾಲೇಜು ಇಲ್ಲಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಅರ್ಥಶಾಸ್ತ್ರದಲ್ಲಿ ವೃತ್ತಿ ಮತ್ತು ಭವಿಷ್ಯದಲ್ಲಿ ಅವಕಾಶಗಳು ಎನ್ನುವ ವಿಷಯದ ಮೇಲೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಕಿಶನ್ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಭಾಗವಹಿಸಿ ಅರ್ಥಶಾಸ್ತ್ರ ಕೇವಲ ಹಣಕಾಸು ಮತ್ತು ಮಾರುಕಟ್ಟೆಗಳ ಅಧ್ಯಯನ ಮಾತ್ರವಲ್ಲದೆ ಶೈಕ್ಷಣಿಕ, ಸಂಶೋಧನಾ ಕ್ಷೇತ್ರ, ಬ್ಯಾಂಕಿಂಗ್, ಡೇಟಾ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಅವಕಾಶಗಳಿದ್ದು ವಿದ್ಯಾರ್ಥಿಗಳು ಪದವಿ ಹಂತದಲ್ಲಿಯೇ ಈ ಬಗ್ಗೆ ಸರಿಯಾದ ಅಧ್ಯಯನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಐ ಕ್ಯೂ ಎಸಿ ಸಂಚಾಲಕರಾದ ಸಂದೀಪ್ ಕೆ, ಕಾಲೇಜಿನ ಆಡಳಿತ ಅಧಿಕಾರಿ ಡಾ. ಮೋಹನ್ ಕೆ ಎನ್, ಪ್ರಾಕ್ತನ ವಿದ್ಯಾರ್ಥಿ ಶಶಾಂಕ್ ಕೆ ಸಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕರಾದ ಶ್ರೀ ನಾಗರಾಜ್ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕ ನಾರಾಯಣ ವೈ ವಂದಿಸಿದರು .

ಅಂತಿಮ ಬಿಎ ವಿದ್ಯಾರ್ಥಿ ಕೀರ್ತನ್ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದ ಅಂಗವಾಗಿ ಅಂತರ ತರಗತಿ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.

Related Articles

Back to top button
error: Content is protected !!