ಇತರೆ

ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆ: ಯುಕೆಜಿ ಮಕ್ಕಳ ಪದವಿ ಪ್ರಧಾನ, ಮಾತೃ ವಂದನಾ ಕಾರ್ಯಕ್ರಮ

Views: 28

ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯುಕೆಜಿ ಮಕ್ಕಳ ಪದವಿ ಪ್ರಧಾನ ಸಮಾರಂಭ ಹಾಗೂ ಮಾತೃ ವಂದನಾ ಕಾರ್ಯಕ್ರಮ ಮಾ.27 ರಂದು ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಎಲ್‌ಕೆಜಿ ಮಕ್ಕಳ ಸ್ವಾಗತ ನೃತ್ಯದೊಂದಿಗೆ ಪ್ರಾರಂಭಿಸಿ ನಂತರ ಯುಕೆಜಿ ಮಕ್ಕಳು ಗ್ರಾಜ್ಯು ಯೇಷನ್ ಗೌನ್ ಮತ್ತು ಕ್ಯಾಪ್ ಧರಿಸಿ ತುಂಬಾ ಸಂತೋಷದಿಂದ ವೇದಿಕೆಗೆ ಬಂದರು.

ಶಾಲಾ ಸಂಚಾಲಕರು ಹಾಗೂ ಅತಿಥಿ ಗಣ್ಯರು ಮಕ್ಕಳಿಗೆ ಗ್ರಾಜ್ಯುಯೇಷನ್ ಪ್ರಮಾಣಪತ್ರ ಹಾಗೂ ಸ್ಯಾಷಸ್ ಗಳನ್ನು ಗಳನ್ನು ನೀಡಿ ಅಭಿನಂದಿಸಿದರು. ನಂತರ ಯುಕೆಜಿ ಮಕ್ಕಳು ತಮ್ಮ ಮೂರು ವರ್ಷದ ಅನುಭವವನ್ನು ಹಂಚಿಕೊಂಡರು ಯುಕೆಜಿ ಮಕ್ಕಳ ಧನ್ಯವಾದ ನೃತ್ಯದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ತದನಂತರ ಮಾತ್ರವಂದನ ಕಾರ್ಯಕ್ರಮವನ್ನು ಅತ್ಯಂತ ಭಾವಪೂರ್ಣವಾಗಿ ಮತ್ತು ಯಶಸ್ವಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ಪೀಠಿಕೆಯಲ್ಲಿ ತಂದೆ ತಾಯಿಯರ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಉದ್ದೇಶ ಸ್ಪಷ್ಟವಾಗಿ ವ್ಯಕ್ತವಾಗಿದೆ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಶ್ರೀಯುತ ಸಂತೋಷ್ ಶೆಟ್ಟಿ ಅವರು ತಾಯಿಯ ಮಹತ್ವದ ಬಗ್ಗೆ ಹೃದಯಂಗಮವಾಗಿ ವಿವರಿಸಿದರು ತಾಯಿ ಮತ್ತು ನಮ್ಮ ಜೀವನದಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತಾಳೆ ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸಿ ಪ್ರತಿಯೊಬ್ಬರೂ ತಾಯಿಯನ್ನು ಗೌರವಿಸಬೇಕು ಎಂದು ಹೇಳಿದರು.

ಅದೇ ರೀತಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಪ್ರೇಮ ಅವರು ತಂದೆಯ ಪಾತ್ರದ ಬಗ್ಗೆ ಮಾತನಾಡಿದರು. ತಂದೆ ಮಕ್ಕಳಿಗೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಒದಗಿಸುತ್ತಾನೆ ಆದರೆ ಅವುಗಳು ಹೇಗೆ ಸರಿಯಾಗಿ ಬೆಳೆಸಿಕೊಳ್ಳಬೇಕು ಎಂಬುದನ್ನು ತಾಯಿ ಕಳಿಸುತ್ತಾಳೆ ಎಂಬ ಅರ್ಥಪೂರ್ಣ ಸಂದೇಶ ನೀಡಿದರು. ಇಂತಹ ಮೌಲ್ಯಾಧಾರಿತ ಕಾರ್ಯಕ್ರಮಗಳು ಪ್ರತಿಯೊಂದು ತರಗತಿಗಳಲ್ಲಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು ಇದೇ ಸಂದರ್ಭದಲ್ಲಿ ಜಯಶೀಲಶೆಟ್ಟಿ ಅವರು ಕಾರ್ಯಕ್ರಮದ ಕುರಿತು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದರು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ತುಂಬಾ ಉಪಯುಕ್ತವಾಗಿದೆ. ಆನಂತರ ಎಸ್ ಡಿ ಎಂ ಸಿ ಅಧ್ಯಕ್ಷರು ತಂದೆ ತಾಯಿಯ ಮಹತ್ವದ ಬಗ್ಗೆ ಒಂದೆರಡು ಮಾತನಾಡಿದರು. 

 ಶಾಲಾ ನೂತನ ಪ್ರಾಂಶುಪಾಲರಾದ ಶ್ರೀಮತಿ ಸುಪ್ರೀತಾ ಪೂಜಾರಿ ಮಕ್ಕಳಿಗೆ ಶುಭ ಹಾರೈಸಿದರು.ಶ್ರೀಮತಿ ಪ್ರೀಯಾ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button
error: Content is protected !!