ಜನಮನ

ಬಸ್ರೂರು ಗ್ರಾಮ ಪಂಚಾಯಿತಿ: ಅಂಗಡಿ ಕೋಣೆ ಹರಾಜು ಮಂಜುನಾಥ ಶೆಟ್ಟಿಗಾರರಿಗೆ ಅನ್ಯಾಯ; ನ್ಯಾಯಕ್ಕಾಗಿ ಮೊರೆ

Views: 625

ಕುಂದಾಪುರ: ಕಳೆದ ಒಂದೂವರೆ ವರ್ಷದಿಂದ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮ ಪಂಚಾಯಿತಿಯಿಂದ ಅಂಗಡಿ ಕೋಣೆಯ ಕನಸು ಕಂಡ ಮಂಜುನಾಥ ಶೆಟ್ಟಿಗಾರರು ಪಂಚಾಯಿತಿಯಿಂದ ಅನ್ಯಾಯಕ್ಕೆ ಒಳಗಾಗಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.

ಬಸ್ರೂರು ಗ್ರಾಮ ಪಂಚಾಯತ್ ಕಳೆದ ವರ್ಷ ಜೂನ್ ತಿಂಗಳಲ್ಲಿ ಮಂಜುನಾಥ್ ಶೆಟ್ಟಿಗಾರ ಅವರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗಡಿ ಕೋಣೆ ಸಂಖ್ಯೆ 27ನ್ನು 18,000 ರೂ. ಮುಂಗಡ ಹಣ ಹಾಗೂ 3,000 ಬಾಡಿಗೆ ಎಂದು ವಸೂಲಿ ಮಾಡಿ ಮಂಜುನಾಥ ಶೆಟ್ಟಿಗಾರರಿಗೆ ನೀಡಿತ್ತು. ಮಂಜುನಾಥ್ ಶೆಟ್ಟಿಗಾರ್ ಅಂಗಡಿ ಕೋಣೆಯನ್ನು ಸಾಲ ಮಾಡಿ ಸುಮಾರು 3 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ದುರಸ್ತಿಗೊಳಿಸಿದ್ದರು. ಆದರೆ ಗ್ರಾಮ ಪಂಚಾಯತ್ ಮಾತ್ರ ಮಂಜುನಾಥ್ ಶೆಟ್ಟಿಗಾರ್ ಅವರಿಗೆ ಅಂಗಡಿ ಕೋಣೆಗೆ ಲೈಸನ್ಸ್ ನೀಡಿರಲಿಲ್ಲ.

ಈ ಬಗ್ಗೆ ಗ್ರಾಮ ಪಂಚಾಯಿತಿನಲ್ಲಿ ವಿಚಾರಿಸಿದಾಗ ಅಂಗಡಿ ಕೋಣೆಯನ್ನು ವಿದ್ಯಾ ಕುಮಾರಿ ಎಂಬುವರ ಹೆಸರಿನವರಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಹಲವು ಮನವಿಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತ ಮಂಜುನಾಥ್ ಶೆಟ್ಟಿಗಾರ್ ಆರೋಪಿಸಿದ್ದಾರೆ.

ಏನಿದು ಅವೈಜ್ಞಾನಿಕ ಅಂಗಡಿ ಏಲಂ

ಅದೊಂದು ದಿನ ಪಂಚಾಯಿತಿನಲ್ಲಿ ನಡೆದ ಏಲಂನಲ್ಲಿ ಮಂಜುನಾಥ್ ಶೆಟ್ಟಿಗಾರರಿಗೆ  ರೂ.4,500 ಫಿಕ್ಸ್ ಆಗಿತ್ತು. ಅದಾದ ಮೇಲೆ ಪಂಚಾಯತ್ ಸದಸ್ಯ ಸದಾನಂದ ಅವರು ತನ್ನ ಹೆಂಡತಿ ಹೆಸರಿಗೆ 4,800 ರೂಪಾಯಿಗೆ  ಕೂಗಿದ್ದರಿಂದ ವಾದ ವಿವಾದ ನಡೆದು ಸೇರಿದ ಗ್ರಾಮಸ್ಥರು ಪುನಃ ಏಲಂ ಮಾಡಿ ಎಂದು ಕೇಳಿಕೊಂಡಾಗ ಪಂಚಾಯಿತಿಯವರು ಬೆಳಿಗ್ಗೆ 10 ಗಂಟೆಯೊಳಗೆ ನಿಮ್ಮ ಹಣ ಪಂಚಾಯತ್ ನಲ್ಲಿ ಕಟ್ಟಿ ಎಂದು ಶೆಟ್ಟಿಗಾರರಿಗೆ ಸೂಚಿಸಿದರು. ಬೆಳಿಗ್ಗೆ  ಹಣ ಹಿಡಿದುಕೊಂಡು ಹೋಗಿ ಪಂಚಾಯಿತಿಗೆ ಕಟ್ಟುವಷ್ಟರಲ್ಲಿ ಸದಾನಂದ ಅವರು ತಮ್ಮ ಪತ್ನಿ  ಹೆಸರಿಗೆ ಹಣವನ್ನು ಕಟ್ಟಿಸಿಕೊಂಡಿದ್ದಾರೆ ಅದಾದ ಮೇಲೆ ಅಗ್ರಿಮೆಂಟಿಗೆ ಸೈನ್ ಸಹ ಹಾಕಿಸಿಕೊಂಡಿದ್ದಾರೆ.

ಅನ್ಯಾಯಕ್ಕೆ ಒಳಗಾದ ಮಂಜುನಾಥ್ ಶೆಟ್ಟಿಗಾರ  ಮತ್ತು ಗ್ರಾಮಸ್ಥರು ಪುನಃ ಸಾರ್ವಜನಿಕವಾಗಿ ಏಲಂ ಮಾಡಿ ಯಾವ ಕಾರಣಕ್ಕೂ ಸದಾನಂದ ಅವರಿಗೆ ಅಂಗಡಿ ರೂಮ್ ಕೊಡಲು ಸಾಧ್ಯವಿಲ್ಲ ಮಂಜುನಾಥ್ ಶೆಟ್ಟಿಗಾರ್ ಅವರಿಗೆ ಕೊಡಿ ಇಲ್ಲವೇ ಖರ್ಚು ಮಾಡಿದ ಹಣವನ್ನಾದರೂ ನೀಡಿ ಎಂದು ನ್ಯಾಯಕ್ಕೆ ಮೊರೆ ಹೋಗಿದ್ದಾರೆ.ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು  ಶೆಟ್ಟಿಗಾರರು ಆರೋಪಿಸಿದ್ದಾರೆ.

ಪಂಚಾಯತ್ ಸದಸ್ಯರ ಹೆಂಡತಿ, ತಂಗಿ ಹೆಸರಲ್ಲಿ ರೂಮ್ ಪಡೆಯಲು ಹೇಗೆ ಸಾಧ್ಯ ಅವೈಜ್ಞಾನಿಕ ಏಲಂ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತ್ ನ ನಡೆಗೆ ಬಸ್ರೂರು ಗ್ರಾಮಸ್ಥರು ಪಕ್ಷ ಬೇದ ಮರೆತು ಮಂಜುನಾಥ್ ಶೆಟ್ಟಿಗಾರ್ ಗೆ ನ್ಯಾಯ ಸಿಗಲೇಬೇಕು.ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಅನ್ಯಾಯದ ವಿರುದ್ಧ ಹೋರಾಟ ನಡೆಸುವ ಕುರಿತು ಎಚ್ಚರಿಕೆ ನೀಡಿದ್ದಾರೆ.

 

 

Related Articles

Back to top button
error: Content is protected !!