ಸಾಂಸ್ಕೃತಿಕ
ಬಡಗುತಿಟ್ಟಿನ ಹೆಸರಾಂತ ಸ್ತ್ರೀ ಪಾತ್ರಧಾರಿ ಶಶಿಕಾಂತ್ ಶೆಟ್ಟಿ ಕಾರ್ಕಳ ಮಣಿಪಾಲ ಆಸ್ಪತ್ರೆಗೆ ದಾಖಲು
Views: 1464
ಕನ್ನಡ ಕರಾವಳಿ ಸುದ್ದಿ: ಬಡಗುತಿಟ್ಟಿನ ಹೆಸರಾಂತ ಸ್ತ್ರೀ ವೇಷಧಾರಿ ಯಕ್ಷ ಚಂದ್ರಿಕೆ ಬಿರುದಾಂಕಿತ ಶಶಿಕಾಂತ ಶೆಟ್ಟಿ ಅವರು ನ್ಯೂಮೋನಿಯಾ ಹಾಗೂ ಉಸಿರಾಟ ತೊಂದರೆಯಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಂಭೀರ ಸ್ಥಿತಿಯಲ್ಲಿರುವ ಶಶಿಕಾಂತ್ ಶೆಟ್ಟಿಯವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತೆ ರಂಗದಲ್ಲಿ ಕಾಣುವಂತಾಗಲಿ ಎಂದು ಅಪಾರ ಯಕ್ಷಾಭಿಮಾನಿಗಳು ಪ್ರಾರ್ಥಿಸಿಕೊಂಡಿದ್ದಾರೆ.






