ಬಂಗಾಳದ ಕರಾವಳಿಗೆ ರೆಮಲ್ ಚಂಡಮಾರುತ..! ಹವಾಮಾನ ಇಲಾಖೆ ತೀವ್ರ ಮುನ್ನೆಚ್ಚರಿಕೆ..

Views: 69
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ರೆಮಲ್ ಚಂಡಮಾರುತ ದೇಶದ ಅನೇಕ ಕಡೆಗಳಲ್ಲಿ ಪರಿಣಾಮ ಬೀರಿದೆ. ದೇಶದ ದಕ್ಷಿಣ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕೇರಳ, ಆಂಧ್ರಪ್ರದೇಶ ಮತ್ತು ಕರ್ನಾಟಕ ಸೇರಿ ದಕ್ಷಿಣದ ಹಲವು ರಾಜ್ಯಗಳಿಗೆ ಮೇ 28 ರವರೆಗೆ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.
ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ರೆಮಲ್ ಚಂಡಮಾರುತದ ಕೇಂದ್ರವು ಖೇಪುಪಾರಾದಿಂದ ದಕ್ಷಿಣ-ಆಗ್ನೇಯಕ್ಕೆ ಸುಮಾರು 360 ಕಿಮೀ ಮತ್ತು ಸಾಗರ್ ದ್ವೀಪದ ದಕ್ಷಿಣ-ಆಗ್ನೇಯಕ್ಕೆ 350 ಕಿಮೀ ದೂರದಲ್ಲಿದೆ. ಭಾನುವಾರ ರೆಮಲ್ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಸ್ಕೈಮೆಟ್ ಹವಾಮಾನದ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಗಂಗಾನದಿ ಪಶ್ಚಿಮ ಬಂಗಾಳದ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೇ 25 ಮತ್ತು 27 ರ ನಡುವೆ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿಯಲ್ಲಿ ಸಮುದ್ರದ ಪರಿಸ್ಥಿತಿಯು ಅಪಾಯಕಾರಿಯಾಗಲಿದ್ದು, ಸಮುದ್ರದಲ್ಲಿ ಎತ್ತರದ ಅಲೆಗಳು ಉಂಟಾಗಬಹುದು.
ಈಶಾನ್ಯ ಭಾರತ, ಕರ್ನಾಟಕ, ಕೇರಳ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಈಶಾನ್ಯ ಭಾರತದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರೆಮಲ್ ಚಂಡಮಾರುತ ತೀವ್ರತೆ ಹೆಚ್ಚುಗೊಳ್ಳಲಿರುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಆಂಧ್ರಪ್ರದೇಶ, ದಕ್ಷಿಣ ತಮಿಳುನಾಡು, ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರದ ಪೂರ್ವ ಭಾಗಗಳು ಮತ್ತು ಜಾರ್ಖಂಡ್‌ನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಛತ್ತೀಸ್‌ಗಢ, ಕೊಂಕಣ ಮತ್ತು ಗೋವಾ, ವಿದರ್ಭ, ಮರಾಠವಾಡ ಮತ್ತು ಉತ್ತರಾಖಂಡದ ರಾಯಲಸೀಮಾ ಭಾಗಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.






