ಸಾಂಸ್ಕೃತಿಕ

ಪ್ರಧಾನಿ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಪರ್ಷೋತ್ತಮ

Views: 0

ದೇಶದ ಕರಕುಶಲ ಕರ್ಮಿಗಳಿಗೆ ವರದಾನವಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿರುವ “ಪಿಎಂ ವಿಶ್ವಕರ್ಮ” ಯೋಜನೆಯನ್ನು ಕೇಂದ್ರ ಸಚಿವ ಪರ್ಷೋತ್ತಮ್ ರೂಪಾಲಾ ಅವರು ಸೆ.17ರಂದು ಮಂಗಳೂರಿನ ಟಿ.ಎಂ.ಪೈ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಿದರು.

ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಸಚಿವ ರೂಪಾಲಾ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಪ್ರಧಾನ ಭಾಷಣ ಮಾಡಿದ ಅವರು, ಇಂದು ಈ ಯೋಜನೆಯನ್ನು ಉದ್ಘಾಟಿಸಲು ಮಂಗಳೂರಿಗೆ ಬಂದಿರುವುದು ಖುಷಿ ಕೊಟ್ಟಿದೆ.

ಇಂದು ವಿಶ್ವಕರ್ಮರು ಇಲ್ಲದಿದ್ದರೆ ವ್ಯವಸ್ಥೆಯನ್ನು ಊಹಿಸಿಕೊಳ್ಳುವುದಕ್ಕೂ ಕಷ್ಟ ಸಾಧ್ಯವಾಗುತ್ತಿತ್ತು.

ಸಮಾಜದಲ್ಲಿ ವ್ಯಕ್ತಿಗಳಿಗೆ ಸೌಂದರ್ಯದ ಕಲ್ಪನೆಯನ್ನು ನೀಡಿದ್ದೇ ವಿಶ್ವಕರ್ಮರು ಎಂದು ಶ್ಲಾಘಿಸಿದರು.

ಕರಕುಶಲ ಕರ್ಮಿಗಳು ತಯಾರಿಸಿದ ಪರಿಕರಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್‌ ಅವರು ಪ್ರಸ್ತಾವನೆ ಮಾಡಿದರು.

ವೇದಿಕೆಯಲ್ಲಿ ರಾಜ್ಯ ಮೀನುಗಾರಿಕೆ ಸಚಿವ ಮಾಂಕಾಳು ವೈದ್ಯ, ಉತ್ತರ ಕ್ಷೇತ್ರ ಶಾಸಕ ಭರತ್‌ ಶೆಟ್ಟಿ, ಮಂಗಳೂರು ಮೇಯರ್‌ ಸುಧೀರ್ ಶೆಟ್ಟಿ ಕಣ್ಣುರು, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈಮುಹಿಲನ್, ಭಾರತ ಸರಕಾರದ ಮರೈನ್‌ ಫಿಶರೀಶ್‌ ಜಂಟಿ ಕಾರ್ಯದರ್ಶಿ ನೀತು ಕುಮಾರಿ ಪ್ರಸಾದ್, ನೇಶನಲ್ ಫಿಶರೀಶ್‌ ಡೆವಲಪ್‌ಮೆಂಟ್ ಬೋರ್ಡಿನ ಚೀಫ್‌ ಎಕ್ಸಿಕ್ಯೂಟಿವ್‌ ಡಾ ಎಲ್ ಎನ್‌ ಮೂರ್ತಿ, ರಾಜ್ಯ ಸರಕಾರದ ಮೀನುಗಾರಿಕಾ ಇಲಾಖೆ ನಿರ್ದೇಶಕ ದಿನೇಶ್‌ ಕುಮಾರ್‌ ಕಲ್ಲೈರ್‌ ಮೊದಲಾದವರಿದ್ದರು.

Related Articles

Back to top button
error: Content is protected !!