ಯುವಜನ
ಪಿಯುಸಿ ಪರೀಕ್ಷೆ ಬರೆದು ವಾಪಸ್ ಆಗುತ್ತಿದ್ದ ವೇಳೆ ಗಾಳಿಗೆ ಹಾರಿದ ಹಾಲ್‌ಟಿಕೆಟ್ ಹಿಡಿಯಲು ಹೋಗಿ ವಿದ್ಯಾರ್ಥಿ ಪ್ರಾಣವೇ ಹಾರಿತು
Views: 65
ಕನ್ನಡ ಕರಾವಳಿ ಸುದ್ದಿ: ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಬರೆದು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಚಿಗರಹಳ್ಳಿ ಮುಖ್ಯರಸ್ತೆಯ ಜಗದಂಬ ಪೆಟ್ರೋಲ್ ಪಂಪ್ ಬಳಿ ಸಂಭವಿಸಿದೆ.
ಯಡ್ರಾಮಿ ಗ್ರಾಮದ ಆದರ್ಶ ಮಡಿವಾಳಪ್ಪ ಗುರುಶೆಟ್ಟಿ (18) ಮೃತ ದುರ್ದೈವಿ. ಪರೀಕ್ಷೆ ಮುಗಿಸಿ ಸ್ನೇಹಿತರೊಂದಿಗೆ ಊರಿಗೆ ತೆರಳುತ್ತಿದ್ದಾಗ, ಗಾಳಿಗೆ ಹಾರಿದ ತನ್ನ ಹಾಲ್ ಟಿಕೆಟ್ ಹಿಡಿಯಲು ಆದರ್ಶ ರಸ್ತೆಯತ್ತ ಧಾವಿಸಿದ್ದಾನೆ. ಈ ವೇಳೆ ಶಹಪುರ ಕಡೆಯಿಂದ ಅತೀ ವೇಗವಾಗಿ ಬಂದ ಕಾರು ಆತನಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ಯುವಕ ರಸ್ತೆಯಲ್ಲೇ ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






