ಶಿಕ್ಷಣ

ಪಾಸ್ ಆದ್ರೆ ಲವ್ ಮಾಡ್ತೀನಿ ಅಂತ ನನ್ ಹುಡುಗಿ ಹೇಳಿದ್ದಾಳೆ…ಉತ್ತರ ಪತ್ರಿಕೆಯಲ್ಲಿ ಮನವಿ ಮಾಡಿದ SSLC ವಿದ್ಯಾರ್ಥಿ! 

Views: 174

ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿದ ಹುಡುಗಿಗೋಸ್ಕರ ಉತ್ತರ ಪತ್ರಿಕೆಯಲ್ಲಿ SSLC ವಿದ್ಯಾರ್ಥಿ ವಿಚಿತ್ರ ಮನವಿ ಮಾಡಿದ ಘಟನೆ ನಡೆದಿದೆ.

ನಾನು SSLC ನಲ್ಲಿ ಪಾಸ್ ಆದ್ರೆ ಮಾತ್ರ ಲವ್ ಮಾಡ್ತೀನಿ ಅಂತ ನನ್ ಹುಡುಗಿ ಹೇಳಿದ್ದಾಳೆ. ದಯವಿಟ್ಟು ನನ್ನ ಪಾಸ್ ಮಾಡಿಬಿಡಿ ಅಂತಾ ಆನ್ಸರ್ ಶೀಟ್ ನಲ್ಲಿ 500 ರೂಪಾಯಿ ಕೂಡ ಇಟ್ಟಿದ್ದಾನೆ.

ಬೆಳಗಾವಿ ಚಿಕ್ಕೋಡಿ SSLC ಪರೀಕ್ಷಾ ಮೌಲ್ಯಮಾಪನದ ವೇಳೆ ಇಂಥದ್ದೊಂದು ವಿಚಿತ್ರ ಉತ್ತರ ಪತ್ರಿಕೆಯೊಂದು ಪತ್ತೆಯಾಗಿದೆ.

ನನ್ನ ಗರ್ಲ್ ಫ್ರೆಂಡ್ ನೀನು ಪಾಸ್ ಆದ್ರಷ್ಟೇ ನನ್ನ ಲವ್ ಮಾಡುತ್ತೇನೆ ಅಂದಿದ್ದಾಳೆ. ಹೀಗಾಗಿ ಪ್ಲೀಸ್ ಪಾಸ್ ಮಾಡಿ. ನನ್ನ ಪ್ರೀತಿ ನಿಮ್ಮ ಕೈಯಲ್ಲಿದೆ ಎಂದು ಬರೆದು, ಅದರ ಜೊತೆಗೆ 500 ರೂಪಾಯಿ ನೋಟು ಕೂಡ ಇಟ್ಟಿದ್ದಾನೆ.

ಈ ಹಣ ಇಟ್ಕೊಂಡು ನೀವು ಚಹಾ ಕುಡಿಯಿರಿ ಸರ್.. ನನ್ನ ಪಾಸ್ ಮಾಡಿ ಅಂತಾ ಬರೆದಿದ್ದಾನೆ. ನೀವು ಪಾಸ್ ಮಾಡದಿದ್ದರೆ ನನ್ನ ಅಪ್ಪ ಅಮ್ಮ ಮುಂದೆ ಕಾಲೇಜಿಗೆ ಕೇಳಿಸುವುದಿಲ್ಲ ಅನ್ನೋ ಬರಹದ ಉತ್ತರ ಪತ್ರಿಕೆ ಶೀಟ್ ಕೂಡ ಮೌಲ್ಯಮಾಪನದ ವೇಳೆ ಕಂಡು ಬಂದಿದೆ.

 

Related Articles

Back to top button