ಪತ್ನಿ ಕೊಲೆ ನಂತರ ಬೇರೆ ಮದುವೆಯಾಗಿ ವಿದೇಶಕ್ಕೆ ಹಾರಲು ಪ್ಲಾನ್ ಮಾಡಿದ ವೈದ್ಯ… ಮದುವೆ ಆಗೋಕೆ ರೆಡಿಯಾಗಿದ್ದ ಯುವತಿ ಯಾರು?
Views: 532
ಕನ್ನಡ ಕರಾವಳಿ ಸುದ್ದಿ: ಪತ್ನಿಯನ್ನೇ ವೈದ್ಯ ಮಹೇಂದ್ರ ರೆಡ್ಡಿ ಕೊಲೆ ಮಾಡಿದ್ದ. ಇದಾದ ಕೆಲ ದಿನಗಳ ಬಳಿಕ ನಾಲ್ಕೈದು ಮಹಿಳೆಯರಿಗೆ “ನಾನು ನಿಮಗಾಗಿ ನನ್ನ ಹೆಂಡತಿಯನ್ನು ಕೊಂದಿದ್ದೇನೆ” ಎಂಬ ಸಂದೇಶವನ್ನು ವೈದ್ಯ ಕಳುಹಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಅಗಿದ್ದ ಆರೋಪಿ ಮಹೇಂದ್ರ ರೆಡ್ಡಿ, ಮಹಿಳೆಯರಿಗೆ ಸಂದೇಶ ಕಳುಹಿಸಿದ್ದಾನೆ.
ಈ ಹಿಂದೆ ಈತನ ಪ್ರಪೋಸಲ್ ತಿರಸ್ಕರಿಸಿದ್ದ ಮಹಿಳೆಯರಿಗೆ ವೈದ್ಯ ಮೆಸೇಜ್ ಕಳುಹಿಸಿದ್ದ ಎನ್ನುವುದು ತಿಳಿದುಬಂದಿದೆ. ಪೊಲೀಸರು ವಶಪಡಿಸಿಕೊಂಡ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ನಲ್ಲಿದ್ದ ಡೇಟಾವನ್ನು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿದಾಗ ಸಂದೇಶಗಳು ಬಯಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಮಹೇಂದ್ರ ತನ್ನ ಹೆಂಡತಿಯ ಮರಣದ ನಂತರ ಹಳೆಯ ಸಂಬಂಧಗಳನ್ನು ಪುನಃಸ್ಥಾಪಿಸಲು ಪ್ರಯತ್ನಿಸಿದಂತೆ ಕಂಡುಬಂದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಕೃತಿಕಾ ಗೌಡಗೆ ಅನಸ್ತೇಶಿಯಾ ಓವರ್‌ಡೋಸ್ ನೀಡಿ ಕೊಂದಿದ್ದ ವೈದ್ಯ ಮಹೇಂದ್ರ ರೆಡ್ಡಿಯನ್ನು ಅಕ್ಟೋಬರ್‌ನಲ್ಲಿ ಪೊಲೀಸರು ಬಂಧಿಸಿದ್ದರು. ಪತ್ನಿ ಕೊಂದ ಬಳಿಕ ಆಕೆಯದ್ದು ಸಹಜ ಸಾವು ಎಂದು ವೈದ್ಯ ಬಿಂಬಿಸಿದ್ದ. ಆದರೆ, ವೈದ್ಯೆ ಕುಟುಂಬಸ್ಥರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿದ್ದರು. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ ಮಹೇಂದ್ರ ರೆಡ್ಡಿ, ಕೊಲೆ ಪ್ರಕರಣ ನಡೆದ ಆರು ತಿಂಗಳ ಬಳಿಕ ಸಿಕ್ಕಿಬಿದ್ದಿದ್ದ
ಕೃತ್ತಿಕಾ ಸಾವನ್ನಪ್ಪಿದರೆ ಯುವತಿಯ ಜೊತೆ ಇರಬಹುದು ಎಂಬ ಕಾರಣಕ್ಕೆ ಹತ್ಯೆಗೆ ಪ್ಲಾನ್ ರೂಪಿಸಿದ್ದೆ ಎಂದು ಮಹೇಂದ್ರ ಹೇಳಿದ್ದಾನಂತೆ.. ಇನ್ನೂ ಮಹೇಂದ್ರ ಪತ್ನಿ ಸತ್ತು ಕೆಲವೇ ದಿನಗಳಲ್ಲಿ ಗೋವಾದ ಬೀಚ್ನಲ್ಲಿ ಜಾಲಿ ಮಾಡಿದ್ದ.. ಎಲ್ಲ ಆಗೋಯ್ತು ಇನ್ಮೇಲ್ ಆರಾಮಾಗ್ ಇರೋಣ ಅಂತ ಪ್ಲಾನ್ ಮಾಡಿದ್ದ.. ಕೃತಿಕಾಳನ್ನ ಕೊಲೆ ಮಾಡಿ ಬೇರೆ ಮದುವೆಯಾಗಿ ವಿದೇಶಕ್ಕೆ ಹಾರಲು ಮಹೇಂದ್ರ ಪ್ಲಾನ್ ಮಾಡಿದ್ನಂತೆ.. ಸದ್ಯ ಮಹೇಂದ್ರನ ಮದುವೆ ಆಗೋಕೆ ರೆಡಿಯಾಗಿದ್ದ ಆ ಯುವತಿ ಯಾರು ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.






