ಜನಮನ

ಪಟಾಕಿ ಅಂಗಡಿ ಬೆಂಕಿ ದುರಂತ– 12 ಕಾರ್ಮಿಕರು ಸಜೀವ ದಹನ

Views: 51

ಆನೇಕಲ್: ಇಲ್ಲಿನ ಅತ್ತಿಬೆಲೆಯಲ್ಲಿ ಪಟಾಕಿ ಅಂಗಡಿಗೆ ಬೆಂಕಿ ಬಿದ್ದಿದ್ದು, 12 ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

ದುರಂತಕ್ಕೀಡಾದ ಪಟಾಕಿ ಅಂಗಡಿಯಲ್ಲಿ 20 ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕ್ಯಾಂಟರ್‌ನಿಂದ ಪಟಾಕಿ ಅನ್‌ಲೋಡ್ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ದೀಪಾವಳಿಗಾಗಿ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುವ ಬಾಲಾಜಿ ದೊಡ್ಡ ಪಟಾಕಿ ಗೋಡೌನ್‌ನಿಂದ ಶುರುವಾದ ಬೆಂಕಿ, ಅಕ್ಕಪಕ್ಕದ ನಾಲ್ಕೈದು ಅಂಗಡಿಗಳಿಗೂ ವ್ಯಾಪಿಸಿದೆ. ನೋಡ ನೋಡುತ್ತಿದ್ದಂತೆ ಕ್ಯಾಂಟರ್, 2 ಬೊಲೆರೋ, 4 ಬೈಕ್ ಸುಟ್ಟು ಭಸ್ಮವಾಗಿವೆ.

ಮಾಲೀಕ ನವೀನ್ ಅನ್ನುವವರಿಗೆ ಸುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related Articles

Back to top button
error: Content is protected !!