ನೇಯ್ಗೆ ಮತ್ತು ಮಲ್ಲಿಗೆ ಕೃಷಿಕರಾದ ರುಕ್ಮಿಣಿ ಶೆಟ್ಟಿಗಾರ್ ನಿಧನ

Views: 466
ಶಂಕರನಾರಾಯಣ: ನೇಯ್ಗೆ ಮತ್ತು ಮಲ್ಲಿಗೆ ಕೃಷಿಕರಾದ ರುಕ್ಮಿಣಿ ಶೆಟ್ಟಿಗಾರ (91) ಅವರು ಏಪ್ರಿಲ್ 19 ರಂದು ಸ್ವಗ್ರಹದಲ್ಲಿ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ.
ಮೃತರ ಪತಿ ನಿವೃತ್ತ ಅಧ್ಯಾಪಕರಾದ ಮಗ್ಗದ ಮೇಸ್ಟ್ರು ಸಿ.ಗೋಪಾಲ್ ಶೆಟ್ಟಿಗಾರ, ಪುತ್ರ ಉಜಿರೆಯ ಎಕ್ಸೆಲ್ ಕಾಲೇಜಿನ ಆಡಳಿತಾಧಿಕಾರಿ ಹಾಗೂ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಸಿ.ಪುರುಷೋತ್ತಮ ಶೆಟ್ಟಿಗಾರ ಸೇರಿದಂತೆ ಐವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮೃತರು ಸುಮಾರು 55 ವರ್ಷಗಳ ಕಾಲ ನೆಯ್ಗೆ ವೃತ್ತಿ ನಡೆಸಿಕೊಂಡು ಬಂದಿದ್ದು, ಬ್ರಹ್ಮಾವರ ಪ್ರಾಥಮಿಕ ನೇಕಾರ ಸಹಕಾರಿ ಸಂಘದಲ್ಲಿ ಸದಸ್ಯರಾಗಿದ್ದರು. ಹಾಗೂ 40 ವರ್ಷಗಳ ಕಾಲ ಮಲ್ಲಿಗೆ ಹೂವಿನ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಶೃದ್ಧಾಂಜಲಿ,ವಿಶೇಷ ಪೂಜೆ, ಮಿತ್ರಭೋಜನ
ಮೃತರ ಆತ್ಮ ಸದ್ಗತಿಗಾಗಿ ದಿನಾಂಕ 01.05.2024ನೇ ಬುಧವಾರ ಮಧ್ಯಾಹ್ನ 12 ಗಂಟೆಗೆ ಶಂಕರನಾರಾಯಣದ ಶ್ರೀ ಶಂಕರ ನಾರಾಯಣ ದೇವಸ್ಥಾನದ ವಠಾರದಲ್ಲಿ ಗ್ರಾಮ ದೇವರಿಗೆ ವಿಶೇಷ ಪೂಜೆ, ಶ್ರದ್ಧಾಂಜಲಿ, ಹಾಗೂ ಮೃತರ ಆತ್ಮತೃಪ್ತಿಗಾಗಿ ಮಿತ್ರ ಭೋಜನವನ್ನು ಏರ್ಪಡಿಸಿದ್ದೇವೆ.
ತಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೃತರ ಸದ್ಗತಿಗೆ ಪ್ರಾರ್ಥನೆ ಮಾಡಿ, ನಮ್ಮೊಂದಿಗಿದ್ದು, ಸಹಕರಿಸಬೇಕೆಂದು ಈ ಮೂಲಕ ವಿನಂತಿಸುತ್ತೇವೆ
ತಮ್ಮೆಲ್ಲರನ್ನು ಆಮಂತ್ರಿಸುವ,
ಪತಿ,ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ಮತ್ತು ಕುಟುಂಬಸ್ಥರು