ರಾಜಕೀಯ

ನಿಮ್ಮ ‘ಗ್ರಾಮ ಪಂಚಾಯತಿಯಲ್ಲಿ ನೀಡಲಾಗುವ ‘ಸೇವೆ’ಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

Views: 26

ಇದೀಗ ರಾಜ್ಯದ ಗ್ರಾಮೀಣ ಜನತೆಗೆ ಅನುಕೂಲವಾಗುವಂತೆ, ವಿವಿಧ ಸೇವಾ ಸೌಲಭ್ಯಗಳನ್ನು ಸರ್ಕಾರ ಜಾರಿಗೊಳಿಸಿದೆ. ಮುಖ್ಯವಾಗಿ ಸ್ಥಳೀಯರಿಗೆ ಮತ್ತು ಅವರ ಆರ್ಥಿಕ ಪರಿಸ್ಥಿಯನ್ನು ಸದೃಢ ಗೊಳಿಸಬೇಕು ಎಂಬ ಉದ್ದೇಶದಿಂದ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯ್ತಿ ವತಿಯಿಂದ ನೀಡಲಾಗುವ ಸೇವೆಗಳು ಯಾವುವು ? ಮತ್ತು ಅವುಗಳ ಮುಖ್ಯ ಉದ್ದೇಶಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ

ಬಾಪೂಜಿ ಸೇವಾ ಕೇಂದ್ರ (ಬಿ.ಎಸ್.ಕೆ.) (bsk.karnataka.gov.in)

ಗ್ರಾಮೀಣದ ಜನರು ಸ್ವಂತ ಉದ್ಯೋಗ ಕೈಗೊಳ್ಳಬೇಕು. ಅವರು ತಮ್ಮ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಗಾಗಿ ಸಾಲ ಸೌಲಭ್ಯ ಸರ್ಕಾರ ಒದಗಿಸುತ್ತದೆ. ಇವುಗಳನ್ನು ತ್ವರಿತವಾಗಿ ಒಂದೇ ಸೂರಿನಡಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿರುವ ಕೇಂದ್ರವೇ ಬಾಪೂಜಿ ಸೇವಾ ಕೇಂದ್ರವಾಗಿದೆ.

ಈ ಯೋಜನೆಗಳಲ್ಲಿ ಪಂಚತಂತ್ರ, ನಾಡಕಛೇರಿ ತಂತ್ರಾಂಶ ಹಾಗೂ ಭೂಮಿ ತಂತ್ರಾಂಶಗಳನ್ನು ಒಂದು ಗೂಡಿಸಿ ಗ್ರಾಮ ಪಂಚಾಯಿತಿಗಳು ಈ ಸೇವೆಯನ್ನು ನೀಡುತ್ತಿವೆ. ಈಗ ನೀಡುತ್ತಿರುವ 19 ಸೇವೆಗಳ ಜೊತೆಗೆ ಕಂದಾಯ ಇಲಾಖೆಯಿಂದ ಪಹಣಿ ಪತ್ರ ಒಳಗೊಂಡಂತೆ 40 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತದೆ. ಇದರಿಂದ ಸಾರ್ವಜನಿಕರು ತಮ್ಮ ದಾಖಲೆಗಳಗಾಗಿ ಕಛೇರಿಯಿಂದ ಕಛೇರಿಗೆ ಅಲೆಯುವುದು ತಪ್ಪುತ್ತದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 19 ಸೇವೆಗಳು :

ಕಟ್ಟಡಪರವಾನಗಿ

ತೆರಿಗೆನಿರ್ಧರಣಾಪಟ್ಟವಿತರಣೆ

ಕಟ್ಟಡ ಸ್ವಾಧೀನ ಪತ್ರ

ಹೊಸನೀರಿನಸಂಪರ್ಕಕ್ಕಾಗಿಅರ್ಜಿ

ವ್ಯಾಪಾರಪರವಾನಗಿವಿತರಣೆ (ಹೊಟೇಲ್‌ಮತ್ತುಅಂಗಡಿ)

ಕಾರ್ಖಾನೆಗೆಅನುಮತಿ ಪತ್ರ

ಜಾಹೀರಾತುಪರವಾನಗಿ

ನೀರಿನಸಂಪರ್ಕಕಡಿತ

ಕುಡಿಯುವನೀರಿನನಿರ್ವಹಣೆ(ಸಣ್ಣ ರಿಪೇರಿ)

ಬೀದಿ ದೀಪಗಳ ನಿರ್ವಹಣೆ

ಗ್ರಾಮನೈರ್ಮಲ್ಯನಿರ್ವಹಣೆ

ದಾಖಲೆಗಳ ವಿತರಣೆ (ಜನಸಂಖ್ಯೆ, ಬೆಳೆ, ಜಾನುವಾರು ಗಣತಿ, ಬಿಪಿಎಲ್ ಪಟ್ಟಿ)

ESCOMS ನಿರಾಕ್ಷೇಪಣಿಪತ್ರ

ಮನರಂಜನಾ ಪರವಾನಗಿ ನೀಡಿಕೆ ( ಹೊಸ/ಹೆಚ್ಚುವರಿ/ಬದಲಾವಣೆ)

aus 9/11 A-Form 9/11A

9/11 B-Form 9/11B

ರಸ್ತೆ ಅಗೆಯುವುದಕ್ಕಾಗಿ ಅನುಮತಿ

ಅಕುಶಲ ಕಾರ್ಮಿಕರಿಗೆ ಉದ್ಯೋಗ ಚೀಟಿಯನ್ನು ಒದಗಿಸುವುದು (ಎಂ.ಜಿ.ಎನ್.ಆರ್.ಇ.ಜಿ.ಎಸ್)

ಅಕುಶಲ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುವುದು (ಎಂ.ಜಿ.ಎನ್.ಆರ್.ಇ.ಜಿ.ಎಸ್)

ಕಂದಾಯ ಇಲಾಖೆಯ 40 ಸೇವೆಗಳು :

ಜನಸಂಖ್ಯೆ ದೃಢೀಕರಣ ಪತ್ರ

ಜಾತಿ ಮತ್ತು ಆದಾಯ ದೃಢೀಕರಣ ಪತ್ರ

ಹಿಂದುಳಿದ ವರ್ಗಗಳ ಪ್ರಮಾಣ ಪತ್ರ (ಪ್ರವರ್ಗ-1)

ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ (ಪ.ಜಾ/ಪ.ಪಂ)

ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ (ಕೇಂದ್ರ)

ವಾಸಸ್ಥಳ ದೃಢೀಕರಣ ಪತ್ರ

ಆದಾಯ ದೃಢೀಕರಣ ಪತ್ರ 8. ಗೇಣಿ ರಹಿತ ದೃಢೀಕರಣ ಪತ್ರ 9. ವಿಧವಾ ದೃಢೀಕರಣ ಪತ್ರ

ಜೀವಂತ ದೃಢೀಕರಣ ಪತ್ರ

ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ

ಮರು ವಿವಾಹವಾಗದಿರುವ ದೃಢೀಕರಣ ಪತ್ರ

ಜಮೀನು ಇಲ್ಲದಿರುವ ದೃಢೀಕರಣ ಪತ್ರ

ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ

ನಿರುದ್ಯೋಗಿ ದೃಢೀಕರಣ ಪತ್ರ

ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ

ವ್ಯವಸಾಯಗಾರರ ದೃಢೀಕರಣ ಪತ್ರ

Related Articles

Back to top button
error: Content is protected !!