ಸಾಂಸ್ಕೃತಿಕ

ನಿಂತಿದ್ದ ಇಕೋ ಕಾರಿಗೆ ಲಾರಿ ಡಿಕ್ಕಿ: ಜೀ ಕನ್ನಡದ ರಿಯಾಲಿಟಿ ಷೋ ಡ್ಯಾನ್ಸರ್ ಸುಧೀಂದ್ರ ಸಾವಿನ ಬಗ್ಗೆ ಅನುಮಾನ!!

Views: 225

ಕನ್ನಡ ಕರಾವಳಿ ಸುದ್ದಿ:  ನೆಲಮಂಗಲ ತಾಲ್ಲೂಕಿನ ಪೆಮ್ಮನಹಳ್ಳಿ ಬಳಿ ಹೆದ್ದಾರಿಯಲ್ಲಿ ನಿಂತಿದ್ದ ಇಕೋ ಕಾರ್ ಮತ್ತು ಡ್ಯಾನ್ಸರ್ ಸುಧೀಂದ್ರಗೆ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಸುಧೀಂದ್ರ ಸಾವನ್ನಪ್ಪಿದ್ದಾರೆ. ಆದರೇ, ಸಿಸಿಟಿವಿ ದೃಶ್ಯ ನೋಡಿದರೇ, ಇದು ಅಪಘಾತವೋ, ದುರುದ್ದೇಶಪೂರ್ವಕ ಕೊಲೆಯೋ ಎಂಬ ಅನುಮಾನ ಬರುತ್ತದೆ.

ನಿನ್ನೆಯಷ್ಟೇ ಹೊಸ ಕಾರು ಡಿಲಿವರಿ ಪಡೆದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಪಟ್ಟಣದ ನಿವಾಸಿ ಸುಧೀಂದ್ರ ಹೊಸ ಇಕೋ ಕಾರಿನಲ್ಲಿ ಹೋಗುವಾಗ ರಸ್ತೆ ಮಧ್ಯೆ ಕಾರ್ ಕೆಟ್ಟು ನಿಂತಿದೆ. ಇದರಿಂದಾಗಿ ಕಾರ್ ಪರೀಕ್ಷಿಸಲು ಸುಧೀಂದ್ರ ಕಾರ್ ನಿಂದ ಇಳಿದು ಕಾರ್ ಹಿಂಭಾಗ ನಿಂತಿದ್ದಾಗ, ಹಿಂದಿನಿಂದ ಬಂದ ಕ್ಯಾಂಟರ್‌, ಸುಧೀಂದ್ರಗೆ ಡಿಕ್ಕಿ ಹೊಡೆದಿದೆ. ಇದರಿಂದ ಸುಧೀಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಕಾರ್‌ಗೆ ಕ್ಯಾಂಟರ್‌ ಡಿಕ್ಕಿ ಹೊಡೆಯುವ ದೃಶ್ಯ ಸಮೀಪದಲ್ಲೇ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಿಸಿಟಿವಿ ದೃಶ್ಯವನ್ನು ನೋಡಿದರೇ, ಇದು ಅಪಘಾತದಂತೆ ಕಾಣುತ್ತಿಲ್ಲ. ದುರುದ್ದೇಶಪೂರ್ವಕವಾಗಿಯೇ ಕ್ಯಾಂಟರ್‌ ಚಾಲಕ, ಇಕೋ ಕಾರಿನ ಬಳಿಗೆ ಬಂದು ಡಿಕ್ಕಿ ಹೊಡೆದು ಮರ್ಡರ್ ಮಾಡಿದಂತೆ ಕಾಣುತ್ತಿದೆ. ಹೆದ್ದಾರಿ ಸಂಪೂರ್ಣ ಖಾಲಿ ಇತ್ತು. ಬಲಭಾಗದಲ್ಲಿ ಯಾವುದೇ ವಾಹನಗಳು ಇರಲಿಲ್ಲ. ಆದರೂ, ಕ್ಯಾಂಟರ್‌ ಚಾಲಕ ಹೆದ್ದಾರಿಯ ಎಡಭಾಗದಲ್ಲಿ ನಿಂತಿದ್ದ ಇಕೋ ಕಾರಿನ ಬಳಿಗೆ ಲಾರಿ ಬಂದು ಹೆದ್ದಾರಿಯಲ್ಲಿ ನಿಂತಿದ್ದ ಡ್ಯಾನ್ಸರ್ ಸುಧೀಂದ್ರ ಹಾಗೂ ಇಕೋ ಕಾರಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿದೆ.

ಇನ್ನೂ ಷೋರೂಮುನಿಂದ ಡೆಲಿವರಿ ಪಡೆದ 24 ಗಂಟೆಯೊಳಗೆ ಇಕೋ ಕಾರ್ ಹೆದ್ದಾರಿಯಲ್ಲಿ ಕೆಟ್ಟು ನಿಂತ ಬಗ್ಗೆಯೂ ಅನುಮಾನ ವ್ಯಕ್ತವಾಗುತ್ತಿದೆ. ಮಾರುತಿ ಕಂಪನಿಯು ಕಳಪೆ ಗುಣಮಟ್ಟದ ಇಕೋ ಕಾರ್ ಅನ್ನು ಸುಧೀಂದ್ರ ಅವರಿಗೆ ಡೆಲಿವರಿ ನೀಡಿತ್ತೇ ಎಂಬ ಪ್ರಶ್ನೆಯೂ ಉದ್ಭವವಾಗಿದೆ.

ಇನ್ನೂ ಸುಧೀಂದ್ರ ಅವರು ಜೀ ಕನ್ನಡದ ಸೈ ಡ್ಯಾನ್ಸ್ ಷೋ ಸೇರಿದಂತೆ ವಿವಿಧ ರಿಯಾಲಿಟಿ ಷೋಗಳಲ್ಲಿ ಭಾಗಿಯಾಗಿದ್ದರು. ಬೇರೆ ಬೇರೆ ವೈರತ್ವಗಳ ಕಾರಣಗಳಿಂದಾಗಿ ಸುಧೀಂದ್ರರನ್ನು ಅಪಘಾತದ ನೆಪದಲ್ಲಿ ಹತ್ಯೆ ಮಾಡಲಾಯಿತೇ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಬಗ್ಗೆ ದಾಬಸ್ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಸರಿಯಾದ ನಿಟ್ಟಿನಲ್ಲಿ ತನಿಖೆ ನಡೆಸಿ ಸತ್ಯಾಂಶ ಬಯಲಿಗೆಳೆಯಬೇಕಾಗಿದೆ.

Related Articles

Back to top button
error: Content is protected !!