ಕರಾವಳಿ

ನಾಲ್ವರು ಮಕ್ಕಳ ಜೀವ ಉಳಿಸಲು ಎರಡು ದಿನ “ಅವತಾರ್”ವೇಷ ಧರಿಸಿ 5 ಲಕ್ಷ ರೂ.ಸಂಗ್ರಹಿಸಿದ ರವಿ ಕಟಪಾಡಿ

Views: 182

ಉಡುಪಿ: ಉಡುಪಿಯಲ್ಲಿ ಅಷ್ಟಮಿ, ಚೌತಿ ನವರಾತ್ರಿ ಬಂದರೆ ನೂರಾರು ವೇಷಗಳು ಕಾಣಿಸುತ್ತವೆ. ಆದರೆ, ಕಟಪಾಡಿ ರವಿ ಕಳೆದ 10 ವರ್ಷಗಳಿಂದ ವಿವಿಧ ವೇಷ ತೊಡುತ್ತಿದ್ದಾರೆ. ಇತ್ತೀಚೆಗೆ 2021ರಲ್ಲಿ ಡಾರ್ಕ್ ಅಲೈಟ್, 2022ರಲ್ಲಿ ರಾಕ್ಷಸ, 2023ರಲ್ಲಿ ಈ ಸೀ ಫೋಕ್ ವೇಷ, ಹಾಗೂ 2024ರಲ್ಲಿ ಅವತಾರ್ ವೇಷ ಧರಿಸಿದ್ದು ಜನರ ಖುಷಿಗೆ ಪಾತ್ರವಾಗಿದೆ.

ಈ ವೇಷದಿಂದ ಸಂಗ್ರಹವಾದ ನೊಂದ ನೂರಾರು ಕುಟುಂಬದ ಮೊಗದಲ್ಲಿ ನಗು ಕಾಣುವುದಕ್ಕಾಗಿ. ಈ ಬಾರಿ ಶಾಲಾ ಮಕ್ಕಳನ್ನು ಖುಷಿ ಪಡಿಸುವ ಸಲುವಾಗಿ ಅವತಾರ್ 2ರ ವೇಷ ಧರಿಸಿದ್ದಾರೆ. ಎರಡು ದಿನಗಳ ಕಾಲ ವೇಷ ಧರಿಸಿ ಸುಮಾರು 5 ಲಕ್ಷದಷ್ಟು ಹಣವನ್ನು ರವಿ ಕಟಪಾಡಿ ಸಂಗ್ರಹ ಮಾಡಿದ್ದಾರೆ. ಸಂಗ್ರಹವಾದ ಈ ಹಣವನ್ನು ನಾಲ್ವರು ಮಕ್ಕಳ ಚಿಕಿತ್ಸೆಗೆ ನೆರವು ನೀಡಿದ್ದಾರೆ.

ಇನ್ನು ಗಣೇಶ ಚತುರ್ಥಿಯ ವೇಳೆ ಮುಂಬೈಗೆ ರವಿ ಕಟಪಾಡಿಯನ್ನು ಅವರ ಅಭಿಮಾನಿಗಳು ಕರೆಸಿಕೊಂಡಿದ್ದರು. ಅಲ್ಲಿ ಹೋಗಿ ವೇಷ ಧರಿಸಿ ಸಂಗ್ರಹ ಮಾಡಿದ ಹಣಕ್ಕೆ ಮತ್ತೆ ಹಣ ಸೇರಿಸಿ ಇನ್ನಷ್ಟು ಮಕ್ಕಳಿಗೆ ನೆರವಾಗಿದ್ದಾರೆ. ಈ ಬಾರಿ ತನ್ನ ಗೆಳೆಯನ ಜೊತೆ ಅವತಾರ್ ವೇಷ ಧರಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಅಷ್ಟಮಿ, ನವರಾತ್ರಿ, ಗಣೇಶ ಚೌತಿಯಂದು ವಿವಿಧ ವೇಷಗಳನ್ನು ಧರಿಸಿ ನೊಂದ ಬಡ ಮಕ್ಕಳಿಗೆ, ಬಡ ಕುಟುಂಬಗಳಿಗೆ ಸಹಾಯ ಮಾಡುವುದು ನನ್ನ ಮುಖ್ಯ ಉದ್ದೇಶ ಹಾಗೂ ಗುರಿಯಾಗಿದೆ ಎಂದು ತಿಳಿಸಿದರು.

 

Related Articles

Back to top button
error: Content is protected !!