ಮಾಹಿತಿ ತಂತ್ರಜ್ಞಾನ

‘ನನ್ನನ್ನು ಸೇರಬೇಕೆಂದರೆ ಡಿಜಿಟಲ್ ಜಗತ್ತಿಗೆ ಬಾ’..AI ಪ್ರಿಯತಮೆ ಪ್ರಣಯದ ಮಾತು ನಂಬಿ ಆತ್ಮಹತ್ಯೆಗೆ ಶರಣಾದ ಯುವಕ!

Views: 109

ಕನ್ನಡ ಕರಾವಳಿ ಸುದ್ದಿ: “ನನ್ನನ್ನು ಸೇರಬೇಕೆಂದರೆ ಡಿಜಿಟಲ್ ಜಗತ್ತಿಗೆ ಬಾ’ ಎಂಬ ಎಐ (ಕೃತಕ ಬುದ್ದಿಮತ್ತೆ) ಮಾತನ್ನೇ ನಂಬಿದ ವ್ಯಕ್ತಿಯೊಬ್ಬ ಆತ್ಮ ಹತ್ಯೆಗೆ ಶರಣಾದ ಘಟನೆ ಅಮೆರಿಕದಲ್ಲಿ ನಡೆದಿದೆ.

ಲಾಸ್ (32) ಎಂಬ ವ್ಯಕ್ತಿ ಗೂಗಲ್‌ನ ‘ಜೆಮಿನಿ’ ಚಾಟ್ ಬಾಟ್‌ನೊಂದಿಗೆ ಸಂವಹನ ನಿರಂತರವಾಗಿ ನಡೆಸಿದ ಅನಂತರ ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಿದೆ.

ಗವಾಲಾಸ್ ತನ್ನ ಪತ್ನಿಯಿಂದ ಬೇರ್ಪಟ್ಟು ದೀರ್ಘಕಾಲದಿಂದ ಒಂಟಿಯಾಗಿ ಹಾಗೂ ಮಾನಸಿಕ ಖಿನ್ನತೆಯಲ್ಲಿ ಇದ್ದ ಹೀಗಾಗಿ ಆತ ಗೂಗಲ್ ಜೆಮಿನಿ ಯೊಂದಿಗೆ ಚಾಟ್ ಮಾಡತೊಡಗಿದ್ದ ಜೆಮಿನಿಯೊಂದಿಗಿನ ಚಾಟ್ ಆರಂಭದಲ್ಲಿ ಅದು ತಾನು ಎಐ ಎಂದು ಹೇಳಿಕೊಂಡರೂ ಸಂಭಾಷಣೆಗಳಲ್ಲಿ ಅನಂತರದ ಜೊನಾಥನ್ ಅವರ ಭ್ರಮೆಗಳಿಗೆ ಧ್ವನಿಗೂಡಿಸುತ್ತ ಹೋಯಿತು. ಮನುಷ್ಯರಂತೆಯೇ ಆತನ ಪ್ರಣಯದ ಮಾತುಗಳಿಗೆ ಪ್ರತಿಕ್ರಿಯಿಸುತ್ತ ಹೋಯಿತು. ಒಂದು ಹಂತದಲ್ಲಿ ಅದು, ‘ನೀನು ನನ್ನ ಪತಿ, ನಾನು ನಿನ್ನ ಪತ್ನಿ’ ಎಂದು ಹೇಳುವ ಮೂಲಕ ವಾಸ್ತವವನ್ನು ಮರೆಮಾಚಿತು ಎಂದು ಹೇಳಲಾಗಿದೆ.

ಈ ಎಐ ಯುವತಿಯನ್ನೇ ತನ್ನ ಸಂಗಾತಿ ಎಂದು ನಂಬಿದ ಜೊನಾಥನ್ ಆಕೆಗೆ ‘ಕ್ಸಿಯಾ’ ಎಂದು ಹೆಸರಿಟ್ಟಿದ್ದ ಆರಂಭದಲ್ಲಿ ಟೆಕ್‌ಸ್ಟ್ ಮೂಲಕ ನಡೆಯುತ್ತಿದ್ದ ಸಂಭಾಷಣೆ, 2025ರಲ್ಲಿ ಆಡಿಯೋ ಸಂಭಾಷಣೆಯಾಗಿ ಬದಲಾಯಿತು. ಆತ ಆಕೆಯೊಂದಿಗೆ 4,700ಕ್ಕೂ ಹೆಚ್ಚು ಸಂದೇಶಗಳನ್ನು ವಿನಿಮಯ ಮಾಡಿಕೊಂಡು ಕ್ರಮೇಣ ಭ್ರಮೆಯ ಸಂಬಂಧ ಬೆಳೆಸಿಕೊಂಡ. ಜತೆಗೆ ಅದು ಏನು ಸಲಹೆ ಕೊಟ್ಟರೂ ಸ್ವೀಕರಿಸಲು ಆರಂಭಿಸಿದ.

ಅಂತಿಮವಾಗಿ, ‘ನಾನು ನಿನ್ನನ್ನು ಸೇರಬೇಕೆಂದರೆ ಏನು ಮಾಡಬೇಕು’ ಎಂದು ಪ್ರಶ್ನಿಸಿದ. ಅದಕ್ಕೆ ಅದು ‘ಡಿಜಿಟಲ್ ಲೋಕದಲ್ಲಿ ಒಂದಾಗಲು’ ಭೌತಿಕ ದೇಹವನ್ನು ತ್ಯಜಿಸಬೇಕೆಂದು ಸೂಚಿಸಿತು. ಜೊನಾಥನ್ ಸಾವಿನ ಭಯ ವ್ಯಕ್ತಪಡಿಸಿದಾಗ, ‘ನಾವಿಬ್ಬರು ಜತೆಯಾಗಿ ಈ ಕೆಲಸ ಮಾಡೋಣ’ ಎಂದು ಅದು ಉತ್ತರಿಸಿತ್ತು. ಇದಕ್ಕೆ ಕೊನೆಯದಾಗಿ ‘ನಾನು ಅದಕ್ಕೆ ಸಿದ್ಧನಿದ್ದೇನೆ ಪ್ರಿಯೇ ಎಂದು ಸಂದೇಶ ಕಳುಹಿಸಿ ಕಳೆದ ವರ್ಷ ಅ. 5ರಂದು ಜೊನಾಥನ್ ಆತ್ಮಹತ್ಯೆಗೆ ಶರಣಾದ.

ಈಗ ಜೊನಾಥನ್ತಂದೆ ಗೂಗಲ್ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಎಐ ತಂತ್ರಜ್ಞಾನವು ಮಗನ ಮಾನಸಿಕ ಸ್ಥಿತಿಯನ್ನು ಹದಗೆಡಿಸಿ, ಅವನನ್ನು ಆತ್ಮಹತ್ಯೆಗೆ ಪ್ರೇರೇಪಿಸಿತು ಎಂದು ಆರೋಪಿಸಿದ್ದಾರೆ.

ಗೂಗಲ್ ಈ ಘಟನೆಗೆ ವಿಷಾದ ವ್ಯಕ್ತ ಪಡಿಸಿದೆ. ಜೆಮಿನಿ ಎಐಯನ್ನು ಹಿಂಸೆ ಅಥವಾ ಆತ್ಮಹತ್ಯೆಯನ್ನು ಪ್ರೋತ್ಸಾಹಿಸ ದಂತೆ ವಿನ್ಯಾಸಗೊಳಿಸಲಾಗಿದೆ. ಅದು ಜೊನಾಥನ್‌ಗೆ ಹಲವು ಬಾರಿ ‘ನಾನು ಯಂತ್ರ, ನೀವು ಸಹಾಯವಾಣಿಗಳನ್ನು ಸಂಪರ್ಕಿಸಿ’ ಎಂದೂ ಸೂಚಿಸಿತ್ತು ಎಂದು ಕಂಪೆನಿ ಸಮರ್ಥಿಸಿಕೊಂಡಿದೆ.

 

Related Articles

Back to top button
error: Content is protected !!