ಸಾಂಸ್ಕೃತಿಕ
ನಟಿ ನಿವೇದಿತಾ ಗೌಡ ಎರಡನೇ ಮದುವೆ ಕುರಿತು ಫಸ್ಟ್ ರಿಯಾಕ್ಷನ್ ಏನು?

Views: 101
ಕನ್ನಡ ಕರಾವಳಿ ಸುದ್ದಿ: ಚಂದನ್ ಶೆಟ್ಟಿ ಅವರ ಮಾಜಿ ಹೆಂಡತಿ ನಟಿ ನಿವೇದಿತಾ ಗೌಡ ಅವರು ಇದೇ ಮೊದಲ ಬಾರಿಗೆ ತಮ್ಮ ಎರಡನೇ ಮದುವೆ ಕುರಿತು ಮಾತನಾಡಿದ್ದಾರೆ. ಮದುವೆ ಎಂದರೆ ಭಯ ಆಗುತ್ತಿದೆ ಎಂದು ಹೇಳಿದ್ದಾರೆ.
ಮನೆಯಲ್ಲಿ ನನ್ನ ಮೇಲೆ ಏನು ಒತ್ತಡ ಹಾಕುತ್ತಿಲ್ಲ. ಎರಡನೇ ಮದುವೆ ಆಗಬೇಕು ಅನಿಸಿದಾಗ ಆಗುತ್ತೇನೆ. ಆದರೂ ಮದುವೆ ಎಂದರೆ ಭಯ ಇದೆ. ನನಗೆ ಸರಿ ಅನಿಸಿದ ಹುಡುಗ ಸಿಗುವ ತನಕ ಮದುವೆ ಆಗಲ್ಲ. ಒಳ್ಳೆಯ ಹುಡುಗ ಸಿಕ್ಕರೇ ಖಂಡಿತ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಇಷ್ಟು ದಿನ ಕಿರುತೆರೆಯಲ್ಲಿ ಎಲ್ಲರನ್ನು ನಗಿಸಿದ್ದ ನಿವೇದಿತಾ ಗೌಡ ಅವರು ಸ್ಯಾಂಡಲ್ವುಡ್ನ ಬೆಳ್ಳಿತೆರೆಗೆ ಎಂಟ್ರಿಯಾಗಿದ್ದಾರೆ. ಐ ಆ್ಯಮ್ ಗಾಡ್ ಎನ್ನುವ ಸಿನಿಮಾದಿಂದ ಕನ್ನಡ ಸಿನಿ ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.