ಕರಾವಳಿ

ಧರ್ಮಸ್ಥಳ ಬುರುಡೆ ಪ್ರಕರಣ ಕ್ಷಣಕ್ಕೊಂದು ತಿರುವು:ವಾಸಂತಿ ಸಾವಿನಲ್ಲಿ ಸುಜಾತ ಭಟ್ ಕೈವಾಡ, ಸಹೋದರ ಸ್ಫೋಟಕ ಆರೋಪ

Views: 191

ಕನ್ನಡ ಕರಾವಳಿ ಸುದ್ದಿ: ಸುಜಾತಾ ಭಟ್ ಅವರು ಕ್ಷಣಕ್ಷಣಕ್ಕೂ ಒಂದೊಂದು ಹೇಳಿಕೆ ನೀಡುತ್ತಿ ರುವುದರಿಂದ ಆಕೆಯ ಹೇಳಿಕೆ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ನನ್ನ ಸಹೋದರಿ ವಸಂತಿ ಎಷ್ಟು ತಾಯಂದಿರಿಗೆ ಮಗಳು ಆಗಲು ಸಾಧ್ಯ. ಮೊದಲು ಸುಜಾತಾ ಭಟ್ ಅವರನ್ನು ಪೊಲೀಸರು ವಶಕ್ಕೆ ಪಡೆಯಬೇಕು ಎಂದು ವಾಸಂತಿ ಸಹೋದರ ಎಂ.ವಿಜಯ್ ಅಕ್ರೋಶ ಹೊರಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಜಾತಾ ಭಟ್ ದಿನಕ್ಕೊಂದು ಸುಳ್ಳು ಸೃಷ್ಟಿ ಮಾಡುತ್ತಿದ್ದಾರೆ. ರಾತ್ರಿ ಮಗಳು ಅಲ್ಲ ಅನ್ನುತ್ತಾರೆ, ಬೆಳಿಗ್ಗೆ ಮಗಳು ಎನ್ನುತ್ತಾರೆ. ಒಂದೊಂದು ಸಲ ಒಂದೊಂದು ರೀತಿಯ ಹೇಳಿಕೆ ನೀಡುತ್ತಾರೆ. ನನ್ನ ಸಹೋದರಿ ವಾಸಂತಿ ಎಷ್ಟು ಜನರಿಗೆ ಮಗಳು ಆಗ ಬೇಕು? ಎಲ್ಲರಿಗೂ ಮಗಳ ಇವಳು? ಎಲ್ಲಾ ಸುಳ್ಳು ಹೇಳುತ್ತ ಇದ್ದಾರೆ. ಈ ಹಿಂದೆ ಸುಜಾತಾ ಭಟ್ ಅವರು ವಿರಾಜಪೇಟೆಗೆ ಬಂದು ಡೆತ್‌ ಸರ್ಟಿಫಿಕೇಟ್ ತೆಗೆದು ಕೊಂಡು ಹೋಗಿದ್ದಾರೆ. ಯಾವಾಗ ಬಂದು ತೆಗೆದುಕೊಂಡು ಹೋಗಿದ್ದಾರೆ ಎಂದು ನನಗೆ ಮಾಹಿತಿ ಇಲ್ಲ. ಸುಜಾತಾ ಭಟ್ ಅವರ ಬಾಯಿಯಿಂದಲೇ ಮಾಧ್ಯಮಗಳ ಮುಖಾಂತರ ಕೇಳಿದ್ದೇನೆ. ವಾಸಂತಿ ಅವರ ಪಾಸ್‌ಪೋರ್ಟ್ ಚಿನ್ನಾಭರಣಗಳನ್ನು ಕದ್ದುಕೊಂಡು ಹೋಗಿದ್ದಾರೆ. ಅವರ ಪೋಟೊ ಆಲ್ಬಮ್, ಬಟ್ಟೆಗಳು ಸೇರಿದಂತೆ ಸುಮಾರು 15 ಲಕ್ಷದಷ್ಟು ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ.

ಸುಜಾತ್ ಭಟ್ ಬಗ್ಗೆ ಸರ್ಕಾರ ಸೂಕ್ತ ತನಿಖೆ ಮಾಡಬೇಕು. ವಾಸಂತಿ ಸಾವಿನ ಹಿಂದೆಯೂ ಯಾರಿದ್ದಾರೆ ಎನ್ನುವುದನ್ನು ತನಿಖೆಯಿಂದ ಹೊರ ಬರಬೇಕು. ವಾಸಂತಿ ಸಾವಿನಲ್ಲಿ ಸುಜಾತ ಭಟ್ ಕೈವಾಡ ಇದೆ ಅಂತ ತನಿಖೆ ಮಾಡಬೇಕು ಎಂದು ವಿಜಯ್ ಅವರು ಆಗ್ರಹಿಸಿದ್ದಾರೆ.

 

Related Articles

Back to top button