ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಇನ್ನಷ್ಟು ತೀವ್ರ, ಕಟ್ಟುಕಥೆ ಕಟ್ಟಿದ್ದ ಸಮೀರನಿಗೆ ವಿಚಾರಣೆ ಬಿಸಿ!

Views: 82
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆಯನ್ನು ಇನ್ನಷ್ಟು ತೀವ್ರ ಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು, ಚಿನ್ನಯ್ಯ ಹಾಗೂ ಕುಟುಂಬ ಸದಸ್ಯರನ್ನು ಮತ್ತಷ್ಟೂ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೊಂದೆಡೆ ಎಐ ವಿಡಿಯೊ ಮೂಲಕ ಧರ್ಮಸ್ಥಳದ ವಿರುದ್ಧ ಕಟ್ಟುಕಥೆ ಕಟ್ಟಿದ್ದ ಸಮೀರನಿಗೆ ಎರಡನೇ ದಿನವೂ ವಿಚಾರಣೆ ಬಿಸಿ ಹತ್ತಿದೆ.
ಸೌಜನ್ಯ ಪ್ರಕರಣದಲ್ಲಿ ಪ್ರಚೋದನಕಾರಿ ವಿಡಿಯೊ ದಿನವೂ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದು, ಆತ ವಿಡಿಯೊ ಮಾಡಲು ಬಳಸಿದ್ದ ಕಂಪ್ಯೂಟರ್, ಮೊಬೈಲ್ ಸೇರಿ ದಂತೆ ಡಿಜಿಟಲ್ ಸಲ ಕರಣೆ ಗಳನ್ನು ಜಪ್ತಿ ಮಾಡುವ ಸಾಧ್ಯತೆಯಿದೆ. ಸಮೀರ್ ನೀಡಿದ ಅಷ್ಟು ದಾಖಲೆಗಳನ್ನು ಪೊಲೀಸರು ಪರಿಶೀಲನೆಗೆ ಒಳಪಡಿಸಿದ್ದರು. ಮಂಗಳವಾರ ಮತ್ತೆ ಸಮೀರ್‌ನನ್ನು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರಿಂದ ವಿಚಾರಣೆಗೆ ಹಾಜರಾಗಿದ್ದಾನೆ. ಸಮೀರ್ ಈಗಾಗಲೇ ಒಂದು ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದು, ವಿಚಾರಣೆಯ ವೇಳೆ ಹೆಚ್ಚುವರಿ ಸಾಕ್ಷಿಗಳು ಲಭ್ಯವಾದರೆ ಬೇರೊಂದು ಪ್ರಕರಣದಲ್ಲಿ ಬಂಧನಕ್ಕೊಳಪಡಿಸುವ ನಿಟ್ಟಿನಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ. ಸಮೀರ್ ವಿಚಾರಣೆಯ ವೇಳೆ ವಿಡಿಯೊ ಮಾಡಿದ್ದ ಉದ್ದೇಶ ಮತ್ತು ಅದಕ್ಕಾಗಿ ಮಾಹಿತಿ ಸಂಗ್ರಹಿಸಿದ ಮೂಲಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಸೌಜನ್ಯ ಪ್ರಕರಣದಲ್ಲಿ ವಿಡಿಯೋ ಮಾಡಲು ಯಾವ ಮೂಲದಿಂದ ಮಾಹಿತಿ ಕಲೆ ಹಾಕಲಾಗಿದೆ. ಅನನ್ಯ ಭಟ್ ಪ್ರಕರಣದಲ್ಲೂ ಎಐ ತಂತ್ರಜ್ಞಾನ ಬಳಸಿ ವಿಡಿಯೋ ಮಾಡಲಾಗಿದೆ. ಅದಕ್ಕಾಗಿ ಯಾವ ಮೂಲದಿಂದ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು ಎಂದು ಪೊಲೀಸರು ವಿವರ ಪಡೆದುಕೊಂಡಿದ್ದಾರೆ
ಇನ್ನು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದಲ್ಲಿ ಪ್ರಮುಖ ಪಾತ್ರವಹಿಸಿರುವ ಚಿನ್ನಯ್ಯ, ಕ್ಷೇತ್ರದ ಪರಮ ಭಕ್ತನೆಂದು ಪತ್ನಿ ಹೇಳಿದ್ದಾರೆ. ಈ ರೀತಿ ಯಾಕೆ ಮಾಡಿದ್ದಾರೋ ಗೊತ್ತಿಲ್ಲ. ಆತ ಒಳ್ಳೆಯವರು. ದುರಾಸೆಯ ಮನುಷ್ಯ ಅಲ್ಲ.ನನಗೆ ಯಾವತ್ತೂ ಕಿರುಕುಳ ಕೊಟ್ಟಿಲ್ಲ. ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರಿಗೆ ಧರ್ಮಸ್ಥಳದ ಮಂಜುನಾಥನೇ ದಾರಿ ತೋರಿಸುತ್ತಾನೆ. ಅವರಿಗೆ ಯಾವ ಅಪಾಯವಾಗದೇ ಮರಳಿ ಬರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಯಾರ ಪರಿಚಯವೂ ಇಲ್ಲ ಎಂದಿದ್ದಾರೆ.
ಇಡೀ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಸ್ಕ್‌ಮ್ಯಾನ್ ಚಿನ್ನಯ್ಯ ವಿಚಾರಣೆಯ ಜತೆಗೆ ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾಳನ್ನೂ ಎಸ್ ಐಟಿ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿ ದ್ದಾರೆ.