ಧರ್ಮಸ್ಥಳ ಪ್ರಕರಣ: ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಇಬ್ಬರಿಗೆ ಎಸ್‌ಐಟಿ ವಿಚಾರಣೆ

Views: 61
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಗಳ ಸಂಬಂಧ ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಗೌಡ ಹಾಗೂ ಹಾಲಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಎಂಬವರಿಗೆ ಎಸ್‌ಐಟಿ ನೋಟೀಸ್ ಜಾರಿ ಮಾಡಿದ್ದು, ವಿಚಾರಣೆಗೆ ಕರೆಸಿಕೊಂಡಿದೆ.
ಕೇಶವ ಗೌಡ ಹಾಗೂ ಶ್ರೀನಿವಾಸ ರಾವ್, ಹಲವು ಬಾರಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅನಾಥ ಶವಗಳು ಸಿಕ್ಕಿದ್ದು ಅದರ ಎಲ್ಲ ದಾಖಲೆಗಳು ಗ್ರಾಮ ಪಂಚಾಯತಿನಲ್ಲಿದೆ ಎಂಬ ಹೇಳಿಕೆ ನೀಡಿದ್ದರು. ಅದಲ್ಲದೆ ಕೇಶವ ಗೌಡ ಸ್ಮಶಾನಾಗುವ ಮೊದಲು ಬಂಗ್ಲೆ ಗುಡ್ಡ ಪರಿಸರಸಲ್ಲಿ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಕೂಡಾ ಹೇಳಿಕೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಇವರಿಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಶುಕ್ರವಾರ ಎಸ್‌ಐಟಿ ಕಚೇರಿಗೆ ಆಗಮಿಸಿದ ಈ ಇಬ್ಬರನ್ನು ಮಧ್ಯಾಹ್ನದವರೆಗೆ ವಿಚಾರಣೆ ನಡೆಸಲಾಗಿದೆ. ಇಬ್ಬರು ಕೂಡ ವಿಚಾರಣೆ ಮುಗಿಸಿ 1:30 ಕ್ಕೆ ವಾಪಸ್ ತೆರಳಿದ್ದಾರೆ. ತೆರಳುವಾಗ ಮಾಧ್ಯಮಗಳಿಗೆ ಯಾವುದೇ ಸಂದರ್ಶನ ನೀಡಿಲ್ಲ ಎನ್ನಲಾಗಿದೆ.