ಕರಾವಳಿ

ಧರ್ಮಸ್ಥಳ ಪ್ರಕರಣ: ದಿನಕ್ಕೊಂದು ಹೊಸ ತಿರುವು, ಮಾಸ್ಕ್ ಚಿನ್ನಯ್ಯನ ಮೇಲೆ ಹಾಕಿದ ಕೇಸ್ ಗಳು ಎಷ್ಟು?

Views: 127

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪದ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದ್ದು. ಅನಾಮಿಕ ದೂರುದಾರನಾಗಿ ಗುರುತಿಸಿಕೊಂಡಿದ್ದ ಚಿನ್ನಯ್ಯ ಎಂಬ ವ್ಯಕ್ತಿಯನ್ನೇ ವಿಶೇಷ ತನಿಖಾ ದಳ (ಎಸ್‌ಐಟಿ) ಪ್ರಥಮ ಆರೋಪಿ (A-I) ಯನ್ನಾಗಿ ಮಾಡಿ, ಹತ್ತು ಹೊಸ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ಎಸ್ ಐಟಿ ಮೂಲಗಳಿಂದ ತಿಳಿದು ಬಂದಿದೆ.

ಮೂಲಗಳಿಂದ ದೊರೆತ ಮಾಹಿತಿಗಳ ಪ್ರಕಾರ ಎಸ್‌ಐಟಿ ದಾಖಲಿಸಿರುವ ಸೆಕ್ಷನ್ಗಳ ಪಟ್ಟಿ ಹೀಗಿದೆ: BNS 336 (ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರನ್ನು ಭಯಭೀತಗೊಳಿಸುವುದು), 230 (ಸಾರ್ವಜನಿಕ ಸೇವಕರಿಗೆ ತಪ್ಪು ಮಾಹಿತಿ ನೀಡುವುದು), 231 (ನ್ಯಾಯಾಲಯದ ಕಾರ್ಯಕ್ಕೆ ಅಡ್ಡಿಪಡಿಸುವುದು), 229 (ಸುಳ್ಳು ಸಾಕ್ಷ್ಯ ನೀಡುವುದು), 227 (ಸಾರ್ವಜನಿಕ ಶಾಂತಿ ಕದಡುವುದು), 228 (ನ್ಯಾಯಾಲಯಕ್ಕೆ ಅಪಮಾನ ಮಾಡುವುದು), 240 (ತಪ್ಪು ಮಾಹಿತಿ ನೀಡಿ ತನಿಖೆ ದಿಕ್ಕು ತಪ್ಪಿಸುವುದು), 236 (ಪಿತೂರಿ), 233 (ತಪ್ಪಾಗಿ ಜನರನ್ನು ಪ್ರೇರೇಪಿಸುವುದು) ಮತ್ತು 248 (ಸುಳ್ಳು ದೂರು ನೀಡಿ ಸಮಯ ಹಾಳುಮಾಡುವುದು) ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಚಿನ್ನಯ್ಯ ವಿರುದ್ಧ 10 ಹೊಸ BNS ಸೆಕ್ಷನ್ಗಳು ಪ್ರಕರಣದ ಹಿಂದಿನ ಸೆಕ್ಷನ್ಗಳನ್ನು ಕೈಬಿಟ್ಟಿರುವ ಎಸ್‌ಐಟಿ, ನ್ಯಾಯಾಲಯದ ಅನುಮತಿ ಪಡೆದು ಚಿನ್ನಯ್ಯ ವಿರುದ್ಧ ಹೊಸದಾಗಿ 10 BNS ಸೆಕ್ಷನ್ಗಳ ಅಡಿಯಲ್ಲಿ ತನಿಖೆ ನಡೆಸಲು ನಿರ್ಧರಿಸಿದೆ. ಈ ಪ್ರಕರಣದಲ್ಲಿ ದೂರುದಾರನಾಗಿದ್ದ ಚಿನ್ನಯ್ಯನನ್ನೇ ಈಗ A-1 ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

 

Related Articles

Back to top button