ಧರ್ಮಸ್ಥಳದ ಬುರುಡೆ ಕಥೆ ಬಿಚ್ಚಿಟ್ಟ ಚಿನ್ನಯ್ಯ

Views: 199
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಚಿನ್ನಯ್ಯ ನನ್ನು ಎಸ್ ಐಟಿ ರವಿವಾರ ತೀವ್ರ ವಿಚಾರಣೆಗೆ ಒಳಪಡಿಸಿದೆ. ಆತ ಇನ್ನೂ ಹಲವಾರು ವಿಷಯಗಳನ್ನು ಬಾಯಿ ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಚಿನ್ನಯ್ಯನನ್ನು ಎಸ್‌ಐಟಿ ಬಂಧಿಸಿ ವಿಚಾರಣೆ ನಡೆಸುತ್ತಿರುವಂತ ಹಲವಾರು ವಿಷಯಗಳು ಬಹಿರಂಗವಾಗುತ್ತಿವೆ ಎಂದು ತಿಳಿದುಬಂದಿದೆ.
ಚಿನ್ನಯ್ಯನ ವಿಚಾರಣೆಯ ಪ್ರತೀ ಹೇಳಿಕೆಯನ್ನು ವೀಡಿಯೋ ರೆಕಾರ್ಡ್ ಮೂಲಕ ದಾಖಲೀಕರಣ ನಡೆಸಲಾಗಿದೆ. ವಿಚಾರಣೆಯಲ್ಲಿ ಚಿನ್ನಯ್ಯ ಹಲವರ ಹೆಸರು ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಆಶ್ರಯ ಕೊಟ್ಟವರಿಂದ ಹಿಡಿದು ಷಡ್ಯಂತ್ರ ರೂಪಿಸಿದವರವರೆಗೂ ಹಲವರ ಹೆಸರು ಬೆಳಕಿಗೆ ಬಂದಿದೆ. ಅವರೆಲ್ಲರಿಗೂ ಶೀಘ್ರ ಎಸ್‌ಐಟಿಯಿಂದ ನೋಟಿಸ್ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ರವಿವಾರ ಕೂಡ ಚಿನ್ನಯ್ಯನಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.
ಚಿನ್ನಯ್ಯ ಬಳಸುತ್ತಿದ್ದ ಮೊಬೈಲ್ ಬಗ್ಗೆ ಎಸ್‌ಐಟಿ ಪೊಲೀಸರು ಕಣ್ಣಿಟ್ಟಿದ್ದರು. ತನ್ನ ಬಳಿ ಮೊಬೈಲ್ ಇಲ್ಲ ಎಂದಿದ್ದನಂತೆ. ನ್ಯಾಯಾಲಯಕ್ಕೆ ಜು. 11ರಂದು ಬುರುಡೆ ಜತೆ ಹಾಜರಾಗುವ ಮುನ್ನವೇ ಚಿನ್ನಯ್ಯನ ಮೊಬೈಲ್ ಅನ್ನು ಆತನ ತಂಡ ಕಸಿದುಕೊಂಡಿರುವ ಸಾಧ್ಯತೆ ಕಂಡುಬಂದಿದೆ. ಅಂದಿನಿಂದ ಚಿನ್ನಯ್ಯ ಬಳಿ ವಕೀಲರಿಗೆ ಮಾತ್ರ ಮಾತನಾಡಲು ಅವಕಾಶವಿತ್ತು. ಈತ ಪ್ರತೀ ದಿನ ಎಸ್ ಐಟಿ ಕಚೇರಿಗೆ ಆಗಮಿಸಿ ತಿಮರೋಡಿಯಲ್ಲಿ ಆಶ್ರಯ ಪಡೆದಿದ್ದ ಈತನ ನ್ಯಾಯವಾದಿ ಧನಂಜಯ್ ಸೂಚನೆಯಂತೆ ಕೆಲವು ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದ ಇದು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ ಎಂಬುದು ತನಿಖಾಧಿಕಾರಿಗಳ ಸಂಶಯವಾಗಿದೆ.