ಧರ್ಮಸ್ಥಳದಲ್ಲಿ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಪ್ರಕರಣ: SITಗೆ ಹಸ್ತಾಂತರ

Views: 78
ಕನ್ನಡ ಕರಾವಳಿ ಸುದ್ದಿ: ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2003ರಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದರು. ಧರ್ಮಸ್ಥಳದ ಪ್ರಕರಣದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಅನನ್ಯಾ ಭಟ್ ನಾಪತ್ತೆ ಪ್ರಕರಣ ಮತ್ತೆ ಸುದ್ದಿಯಾಗಿದ್ದು, ಎಸ್ ಐಟಿ ತನಿಖೆಗೆ ಹಸ್ತಾಂತರಿಸಲಾಗಿದೆ.
ಡಿಜಿ & ಐಜಿಪಿ ಆದೇಶದ ಮೇರೆಗೆ ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ಹಸ್ತಾಂತರ ಮಾಡಿ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ.
ವಾಸಂತಿ ಬೇರೆ, ಅನನ್ಯಾ ನನ್ನ ಮಗಳು ಇದ್ದಿದ್ದು ನಿಜ!
ನನ್ನ ಮಗಳು ಅನನ್ಯಾ ಭಟ್ ಇದ್ದಿದ್ದು ಸತ್ಯ. ಅವಳು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಳು ಎಂದು ಸುಜಾತಾ ಭಟ್ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿದ ಅವರು, ನನ್ನ ಮಗಳನ್ನು ಬೇರೆಯವರ ಹತ್ತಿರ ಬೆಳೆಸಿದ್ದೇನೆ. ನನಗೆ ಮಗಳಿದ್ದಳು ಎಂದು ಯಾರಿಗೂ ಹೇಳಿರಲಿಲ್ಲ. 2003ರಲ್ಲಿ ಆಕೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಳು ಎಂದು ಹೇಳಿದ್ದಾರೆ. ಈಗ ಆಕೆ ಇಲ್ಲ. ನನ್ನ ಮಗಳ ಅಸ್ಥಿ ಸಿಕ್ಕರೆ ಡಿಎನ್ಎ ಪರೀಕ್ಷೆ ಮಾಡಿ ನನಗೆ ಕೊಡಿ ಎಂದು ಎಸ್‌ಐಟಿಗೆ ಕೇಳಿದ್ದೇನೆ. ಈ ಬಗ್ಗೆ ಯಾರನ್ನೂ ವಿಚಾರಣೆ ಮಾಡಿ ಎಂದು ಹೇಳಿಲ್ಲ ಎಂದು ಹೇಳಿದರು. ಅಸ್ಥಿ ಸಿಕ್ಕರೆ ಹಿಂದೂ ಸಂಪ್ರದಾಯ ಪ್ರಕಾರ ಅಂತ್ಯ ಸಂಸ್ಕಾರ ಮಾಡುತ್ತೇನೆ ಎಂದು ಹೇಳಿದ್ದೇನೆಯೇ ಹೊರತು ಯಾರ ಮೇಲೂ ಆರೋಪ ಮಾಡಿಲ್ಲ ಎಂದು ಹೇಳಿದ್ದಾರೆ. ವಾಸಂತಿ ಯಾರು ಎಂದು ಗೊತ್ತಿಲ್ಲ, ಅವಳ ಫೋಟೋ ನನ್ನ ಹತ್ತಿರ ಇಲ್ಲ. ಅವರ ಅಣ್ಣನೂ ಗೊತ್ತಿಲ್ಲ, ವಾಸಂತಿ ಹಾಗೂ ಅನನ್ಯಾ ಭಟ್ ಬೇರೆ ಬೇರೆ ಎಂದು ಸುಜಾತಾ ಭಟ್ ಹೇಳಿದರು.