ದ್ವಿಚಕ್ರ ವಾಹನಗಳಿಗೆ ಹೊಸ ನಿಯಮ: ಎಬಿಎಸ್ ಕಡ್ಡಾಯ

Views: 246
ಕನ್ನಡ ಕರಾವಳಿ ಸುದ್ದಿ: ರಸ್ತೆ ಪ್ರಯಾಣದ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಸಾರಿಗೆ ಇಲಾಖೆಯು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 2026 ರಿಂದ ಎಲ್ಲಾ ಮಾದರಿಯ ಹೊಸ ದ್ವಿಚಕ್ರ ವಾಹನಗಳಿಗೆ ಎಬಿಎಸ್ ಕಡ್ಡಾಯವಾಗಿದೆ.
ಎಂಜಿನ್ ಸಾಮರ್ಥ್ಯವನ್ನು ಲೆಕ್ಕಿಸದೇ ಎಲ್ಲಾ ಮಾದರಿಯ ದ್ವಿಚಕ್ರ ವಾಹನಗಳಿಗೆ ಈ ನಿಯಮ ಅನ್ವಯ ಆಗಲಿದೆ. ಈ ಮೊದಲು 125 ಸಿಸಿ ಎಂಜಿನ್ ಹೊಂದಿರುವ ದ್ವಿಚಕ್ರ ವಾಹನಗಳಿಗೆ ಸಿಂಗಲ್-ಚಾನಲ್ ಎಬಿಎಸ್ ಕಡ್ಡಾಯವಾಗಿತ್ತು. ಜೊತೆಗೆ ಡೀಲರ್ಸ್ಗಳು ದ್ವಿಚಕ್ರ ವಾಹನ ಮಾರಾಟ ಮಾಡುವಾಗ ಎರಡು ಹೆಲ್ಮೆಟ್ಗಳನ್ನು ಕಡ್ಡಾಯವಾಗಿ ನೀಡುವಂತೆ ಆದೇಶಿಸಲು ಸರ್ಕಾರ ಚಿಂತನೆ ನಡೆಸಿದೆ.
2025ರ ಹಣಕಾಸು ವರ್ಷದಲ್ಲಿ ದೇಶದಲ್ಲಿ 1.96 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಮಾರಾಟವಾಗಿವೆ ಅಂತಾ ಆಟೋಮೊಬೈಲ್ ತಯಾರಕರ ಸಂಘ ಹೇಳಿದೆ. ಇವುಗಳಲ್ಲಿ 1.53 ಕೋಟಿ ದ್ವಿಚಕ್ರಗಳು 125 ಸಿಸಿ ಅಥವಾ ಅದಕ್ಕಿಂತ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿವೆ. ಅಂದರೆ ಮಾರಾಟದ ವಾಹನಗಳಲ್ಲಿ ಶೇಕಡಾ 78 ರಷ್ಟು 125 ಸಿಸಿ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯ ಹೊಂದಿರುವ ವಾಹನಗಳಾಗಿವೆ. ಸರ್ಕಾರದ ನಿರ್ಧಾರದಿಂದಾಗಿ 125 ಸಿಸಿಗಿಂತ ಕಡಿಮೆ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಕನಿಷ್ಠ 2,000 ರೂಪಾಯಿ ಹೆಚ್ಚಳವಾಗುವ ಸಾಧ್ಯತೆಯಿದೆ.
ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳಿಗೆ ಅತ್ಯಗತ್ಯ ಸುರಕ್ಷತಾ ಕ್ರಮ. ಸ್ಕಿಡ್ಡಿಂಗ್ನಂತಹ ತುರ್ತು ಸಂದರ್ಭದಲ್ಲಿ ಹಠಾತ್ ಬ್ರೇಕ್ ಹಾಕುವಾಗ ಚಕ್ರ ಲಾಕ್-ಅಪ್ ಆಗೋದನ್ನು ನಿಯಂತ್ರಿಸುತ್ತದೆ. ಬ್ರೇಕ್ ಹಾಕಿದಾಗ ಆಗುವ ಒತ್ತಡವನ್ನು ನಿಯಂತ್ರಿಸಿ ಕಂಟ್ರೋಲ್ಗೆ ಬರುವಂತೆ ಮಾಡುತ್ತದೆ.